ಜಿಲ್ಲೆ

ತ್ರಿವಳಿ ತಲಾಕ್​ ನಿಷೇಧದಿಂದ ಶೋಷಣೆಗೆ ತಡೆ : ಸಂಸತ್​ ಸದಸ್ಯ ಎಸ್​.ಮುನಿಸ್ವಾಮಿ ಅಭಿಪ್ರಾಯ

ಕೋಲಾರ: ತ್ರಿವಳಿ ತಲಾಕ್​ ನಿಷೇಧ ಕಾಯ್ದೆ ಜಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಧೈರ್ಯ ಮಾಡದಿದ್ದಲ್ಲಿ ಮುಸ್ಲಿಂ ಸಮುದಾಯದ ಅಮಾಯಕ ಹೆಣ್ಣುಮಕ್ಕಳು ಜೀವನ ಪರ್ಯಂತ ಶೋಷಣೆಗೆ ಒಳಗಾಗಬೇಕಾಗುತ್ತಿತ್ತು ಎಂದು ಸಂಸದ ಎಸ್​. ಮುನಿಸ್ವಾಮಿ ಹೇಳಿದರು.

ನಗರದ ಟಿ. ಚನ್ನಯ್ಯರಂಗ ಮಂದಿರದಲ್ಲಿ ಜಿಲ್ಲಾಡಳಿತವು ಸ್ವಾತಂತ್ರ$್ಯ ಅಮೃತ ಮಹೋತ್ಸವದ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಜತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಸ್ಲಿಂ ಸಮುದಾಯದಲ್ಲಿ ತ್ರಿವಳಿ ತಲಾಕ್​ ಸಾಮಾಜಿಕ ಪಿಡುಗಾಗಿತ್ತು. ಮೊದಲ ಹೆಂಡತಿಗೆ ತಲಾಕ್​ ನೀಡಿ, ಎರಡನೇ ಮದುವೆಯಾಗುತ್ತಿದ್ದ, ಬಳಿಕ ಆ ಮಹಿಳೆಗೂ ತಲಾಕ್​ ನೀಡುತ್ತಿದ್ದ. ಇದರಿಂದ ಅಮಾಯಕ ಹೆಣ್ಣುಮಕ್ಕಳು ಇತ್ತ ಗಂಡನ ಮನೆಯಲ್ಲೂ ಇರಲಾಗದೆ, ಅತ್ತ ತವರು ಮನೆಗೂ ಹೋಗಲಾಗದೆ ಅತಂತ್ರ ಸ್ಥಿತಿಗೆ ಸಿಲುಕಿ ತೊಂದರೆ ಅನುಭವಿಸುತ್ತಿದ್ದರು. ಈ ಪರಿಸ್ಥಿತಿ ಗಮನಿಸಿದ ಪ್ರಧಾನಿ ಮೋದಿ ಅವರು ತ್ರಿವಳಿ ತಲಾಕ್​ ನಿಷೇಧಿಸಿ, ಅವರೆಲ್ಲರಿಗೂ ನೆಮ್ಮದಿ ಕೊಡಿಸಿದರು ಎಂದು ವಿವರಿಸಿದರು.

ವಿರೋಧ ಪಕ್ಷದ ಕುಮ್ಮಕ್ಕಿನಿಂದ ಕೃಷಿ ಕಾಯ್ದೆ ಹಿಂದಕ್ಕೆ: ರೈತರ ಆದಾಯ ದ್ವಿಗುಣವಾಗಬೇಕು. ಅವರು ಬೆಳೆಯುವ ಬೆಳೆಗಳಿಗೆ ಅವರೇ ದರ ನಿಗದಿ ಮಾಡಬೇಕು. ಮಾರುಕಟ್ಟೆಯಲ್ಲಿ ಶೋಷಣೆ ತಡೆಯುವ ಉದ್ದೇಶದಿಂದ ಪ್ರಧಾನಿ ಮೋದಿ ಅವರು ಕೃಷಿ ಕಾಯ್ದೆ ಜಾರಿಗೊಳಿಸಲು ಮುಂದಾಗಿದ್ದರು. ಆದರೆ ವಿರೋಧ ಪಕ್ಷದವರು ರೈತರಿಗೆ ಕುಮ್ಮಕ್ಕು ಕೊಟ್ಟು ಪ್ರತಿಭಟನೆ ಮಾಡಿಸಿದ್ದರಿಂದ, ರೈತಪರ ನಿರ್ಧಾರ ಕೈಗೊಳ್ಳಲು ಅವಕಾಶ ನಿರಾಕರಿಸಲಾಯಿತು. ಹಾಗಾಗಿ ಕಾಯ್ದೆಯಲ್ಲಿನ ಕೆಲ ಅಂಶಗಳನ್ನು ಅನಿವಾರ್ಯವಾಗಿ ಕೈಬಿಡಬೇಕಾಯಿತು ಎಂದು ಸಂಸದರು ಹೇಳಿದರು.

ಲಾನುಭವಿಗಳ ಜತೆ ಸಂವಾದ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಯೋಜನೆಗಳಿಂದ ಉಪಕೃತರಾಗಿರುವ ಲಾನುಭವಿಗಳೊಂದಿಗೆ ಬೃಹತ್​ ಸಂವಾದ ಕಾರ್ಯಕ್ರಮವನ್ನು ಶ್ರೀದಲ್ಲೇ ಆಯೋಜಿಸಲಾಗುವುದು. ಕೋಲಾರದಲ್ಲಿ ಏರ್ಪಾಡಾಗಲಿರುವ ಈ ಕಾರ್ಯಕ್ರಮವು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆಯಲಿದೆ. ಇದರಲ್ಲಿ 10ರಿಂದ 15 ಸಾವಿರ ಫಲಾನುಭವಿಗಳು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮಕ್ಕೆ ಸಿಎಂ ಅವರನ್ನೂ ಆಹ್ವಾನಿಸಲಾಗುತ್ತದೆ ಎಂದು ಎಸ್​. ಮುನಿಸ್ವಾಮಿ ತಿಳಿಸಿದರು.

ಜಿಲ್ಲಾಧಿಕಾರಿ ವೆಂಕಟ್​ರಾಜಾ ಮಾತನಾಡಿ, ಕೇಂದ್ರ ಸರ್ಕಾರ ಬಡವರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವೆಲ್ಲವನ್ನೂ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ಜನರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.

ವಿಧಾನಪರಿಷತ್​ಗೆ ಆಯ್ಕೆಯಾಗಿರುವ ಕೇಶವಪ್ರಸಾದ್​, ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿಜಯಕುಮಾರ್​, ಮಾಜಿ ಶಾಸಕ ವರ್ತೂರ್​ ಪ್ರಕಾಶ್​, ಜಿಪಂ ಮಾಜಿ ಅಧ್ಯಕ್ಷ ಸಿ.ಎಸ್​.ವೆಂಕಟೇಶ್​, ತಾಪಂ ಮಾಜಿ ಅಧ್ಯಕ್ಷ ಸೂಲೂರು ಆಂಜಿನಪ್ಪ, ಕುಡಾ ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ, ಜಿಪಂ ಸಿಇಒ ಯುಕೇಶ್​ಕುಮಾರ್​, ಜಿಪಂ ಉಪಕಾರ್ಯದರ್ಶಿ ಸಂಜೀವಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಡಾ. ವೇಣುಗೋಪಾಲ್​ ಇನ್ನಿತರರು ಇದ್ದರು.

ಪ್ರಧಾನಿ ಮೋದಿ ವರ್ಚುಯಲ್​ ಸಂವಾದ: ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಪ್ರಯೋಜಿತ ಯೋಜನೆಗಳ ಫಲಾನುಭವಿಗಳ ಜತೆ ವರ್ಚುಯಲ್​ ಸಂವಾದ ನಡೆಸಿದರು. ಕಾರ್ಯಕ್ರಮ ವೀಸಲು ಲಾನುಭವಿಗಳು, ಬಿಜೆಪಿ ಕಾರ್ಯಕರ್ತರು ಮತ್ತು ಸಾರ್ವಜನಿಕರು ಟಿ.ಚನ್ನಯ್ಯ ರಂಗಮಂದಿರದಲ್ಲಿ ಕಿಕ್ಕಿರಿದು ತುಂಬಿದ್ದರು.

ಸ್ವಾತಂತ್ರ$್ಯ ಅಮೃತ ಮಹೋತ್ಸವ ಪಾತೀತ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಶಾಸಕರು, ವಿಧಾನಪರಿಷತ್​ ಸದಸ್ಯರನ್ನು ಆಹ್ವಾನಿಸಲಾಗಿತ್ತು. ಅವರೆಲ್ಲರೂ ಬಂದಿದ್ದರೆ, ನನಗೂ ಒಂದಿಷ್ಟು ವಿಚಾರಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತಿತ್ತು. ಆದರೆ, ಅವರೆಲ್ಲರೂ ಗೈರಾಗಿ ಬೇಸರವನ್ನುಂಟು ಮಾಡಿದ್ದಾರೆ. ಎಸ್​.ಮುನಿಸ್ವಾಮಿ, ಸಂಸದ