ಸುರಪುರ: ಅಂಗವಿಕಲರ ಸ್ವಾವಲಂಬಿ ಜೀವನಕ್ಕಾಗಿ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ತ್ರಿಚಕ್ರ ವಾಹನ ವಿತರಿಸುತ್ತಿದ್ದು, ಅಂಗವಿಕಲರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.
ನಗರದ ವಸಂತ ಮಹಲ್ ಗ್ರೌಂಡ್‌ನಲ್ಲಿ ಬುಧವಾರ ೧೭ ಅಂಗವಿಕಲ ಫಲಾನುಭವಿಗಳಿಗೆ ತಿಚಕ್ರ ವಾಹನ ವಿತರಿಸಿ ಮಾತನಾಡಿದ ಅವರು, ಅಂಗವಿಕಲರು ವಿಶೇಷ ವ್ಯಕ್ತಿಗಳು. ಅವರಿಗೆ ಸ್ವಾವಲಂಬಿಗಳಾಗಿ ಬದುಕುವ ಆಸೆಗೆ ತ್ರಿಚಕ್ರ ವಾಹನ ಆಸರೆಯಾಗಬೇಕು ಎಂದರು.
ಸ್ವಉದ್ಯೋಗ ಮಾಡಿದರೆ ಆತ್ಮಬಲ ವೃದ್ಧಿಸುತ್ತದೆ. ಯಾರೊಬ್ಬರ ಮೇಲೆ ಅವಲಂಬಿತರಾಗದೆ ಜೀವನ ಸಾಗಿಸಬಹುದು. ಸರ್ಕಾರದಿಂದ ದೊರೆಯುವ ಸೌಲಭ್ಯ ಅಂಗವಿಕಲರಿಗೆ ಒದಗಿಸಿಕೊಡಲಾಗುವುದು ಎಂದು ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿವಿಠಲ್ ಯಾದವ, ಜಿಪಂ ಮಾಜಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ್ ವಜ್ಜಲ್, ವೆಂಕೋಬ ಯಾದವ, ರಾಜಾ ವಾಸುದೇವ ನಾಯಕ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ಗುತ್ತೇದಾರ್, ರಾಜಾ ಸಂತೋಷ ನಾಯಕ, ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ರಾಜಾ ಕುಮಾರ ನಾಯಕ, ರಾಜಾ ವಿಜಯಕುಮಾರ ನಾಯಕ, ರಾಜಾ ಸುಶಾಂತ ನಾಯಕ, ಸುರಪುರ ಬ್ಲಾಕ್ ಕಾಂಗ್ರೆಸ್ ತಾಲೂಕಾಧ್ಯಕ್ಷ ನಿಂಗರಾಜ ಬಾಚಿಮಟ್ಟಿ, ಹುಣಸಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ, ನಗರಸಭೆ ಅಧ್ಯಕ್ಷೆ ಹೀನಾಕೌಸರ್, ಭೀಮರಾಯ ಮೂಲಿಮನಿ, ವೆಂಕಟೇಶ ಹೊಸಮನಿ, ನಾಸೀರ ಕುಂಡಾಲೆ ಇತರರಿದ್ದರು.