ಜಿಲ್ಲೆ

ತ್ಯಾಜ್ಯದಿಂದ ಹಣ ಸಂಪಾದಿಸುವ ಕೌಶಲ ಬೆಳೆಸಿಕೊಳ್ಳಿ

reportermys

ಮಂಡ್ಯ: ತ್ಯಾಜ್ಯದಿಂದ ಹಣ ಸಂಪಾದಿಸುವ ಕೌಶಲ ಜ್ಞಾನವನ್ನು ಯುವ ಸಮುದಾಯಕ್ಕೆ ತಿಳಿಸುವ ಅಗತ್ಯತೆ ಇದೆ ಎಂದು ಜಿಲ್ಲಾ ಜೈವಿಕ ಇಂಧನ ಸಂಶೋಧನೆ, ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರದ ಪ್ರಾಧ್ಯಾಪಕ ಡಾ.ಎಲ್.ಪ್ರಸನ್ನಕುಮಾರ್ ಹೇಳಿದರು.
ನಗರದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಬುಧವಾರ ಜಿಲ್ಲಾ ಜೈವಿಕ ಇಂಧನ ಸಂಶೋಧನೆ, ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರ, ವಿಕಸನ ಗ್ರಾಮೀಣಾಭಿವೃದ್ಧಿ ಸಂಸ್ಥೆ ಆಯೋಜಿಸಿದ್ದ ‘ತ್ಯಾಜ್ಯದಿಂದ ಸ್ವಾವಲಂಬನೆ’ ಕಡೆಗೆ ಒಂದು ದಿನದ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದರು.
ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅನಗ್ಯತ್ಯ ತ್ಯಾಜ್ಯ ಮತ್ತು ಪ್ರಕೃತಿಯ ತ್ಯಾಜ್ಯವನ್ನು ಬಳಸಿಕೊಂಡು ಪರಿಸರಕ್ಕೆ ಪೂರಕವಾಗುವ ಸ್ಟ್ರಾ, ಜೈವಿಕ ಅನಿಲ, ರಸಗೊಬ್ಬರ, ಜೈವಿಕ ಇಂದನಗಳನ್ನು ತಯಾರಿಸುವ ತರಬೇತಿ ನೀಡಬೇಕಿದೆ ಎಂದು ತಿಳಿಸಿದರು.
ತೆಂಗಿನ ಗರಿ, ಮನೆಗಳಲ್ಲಿ ಉತ್ಪತ್ತಿಯಾಗುವ ಹಸಿ ಕಸದಿಂದ ಜೈವಿಕ ಅನಿಲ, ಹಸಿ ಮತ್ತು ಒಣ ಕಸದಿಂದ ಗೊಬ್ಬರ ತಯಾರಿಕೆ, ಬಳಸಿ ಅನುಪಯುಕ್ತವಾದ ಅಡುಗೆ ಎಣ್ಣೆಯಿಂದ ಜೈವಿಕ ಇಂಧನ ತಯಾರಿಕೆ, ಜೈವಿಕ ಇಂಧನ ಉಪ ಉತ್ಪನ್ನಗಳ ತಯಾರಿಕೆ, ಜೈವಿಕ ಸೋಪು, ಪಾತ್ರೆ ತೊಳೆಯುವ, ಬಟ್ಟೆ ಒಗೆಯುವ ಲಿಕ್ವಿಡ್, ಗ್ಲಾಸ್ ಕ್ಲೀನರ್, ಡೋರ್ ಕ್ಲೀನರ್ ಸೇರಿದಂತೆ ವಿವಿಧ ವಿಧಾನಗಳನ್ನು ತಯಾರಿಸಬಹುದು ಎಂದು ತಿಳಿಸಿದರು.
ಪ್ರಾಂಶುಪಾಲ ಡಾ.ಎಚ್.ವಿ.ರವೀಂದ್ರ, ಪಿಇಟಿ ಕಾರ್ಯದರ್ಶಿ ಶಿವಪ್ರಸಾದ್, ಡೀನ್ ಡಾ.ಶಿವಕುಮಾರ್, ವಿಕಸನ ಸಂಸ್ಥೆ ನಿರ್ದೇಶಕ ಮಹೇಶ್‌ಚಂದ್ರಗುರು, ಸಂಯೋಜಕ ರಮೇಶ್ ಇತರರಿದ್ದರು.