ಜಿಲ್ಲೆ

ತ್ಯಾಜ್ಯ ವಿಲೇವಾರಿಗೆ ಅನುಕೂಲ

ಲಕ್ಷ್ಮೇಶ್ವರ: ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಮನೆ ಮನೆ ಕಸ ಸಂಗ್ರಹಿಸಲು ಪಟ್ಟಣದ ಪುರಸಭೆಗೆ ಖರೀದಿಸಿದ 5 ಮಿನಿ ಟಿಪ್ಪರ್​ಗಳಿಗೆ ಶಾಸಕ ರಾಮಣ್ಣ ಲಮಾಣಿ ಸೋಮವಾರ ಚಾಲನೆ ನೀಡಿದರು.

‘ಲಕ್ಷ್ಮೇಶ್ವರ ಗದಗ ಜಿಲ್ಲೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ಪಟ್ಟಣ. ಇದನ್ನು ಸ್ವಚ್ಛ, ಸುಂದರ ಪಟ್ಟಣವನ್ನಾಗಿಸಲು ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಲು ಹೆಚ್ಚು ವಾಹನಗಳ ಅಗತ್ಯವಿತ್ತು. ಅಂದಾಜು 33 ಲಕ್ಷ ರೂ. ಅನುದಾನದಲ್ಲಿ 5 ಹೊಸ ವಾಹನಗಳನ್ನು ಖರೀದಿಸಲಾಗಿದೆ. ಕಸ ವಿಂಗಡಣೆ, ತ್ಯಾಜ್ಯ ವಿಲೇವಾರಿಗೆ ಅನುಕೂಲವಾಗುತ್ತದೆ. ಕರೊನಾ ಭೀತಿಯ ನಡುವೆಯೂ ಆರೋಗ್ಯಕರ ಸಮಾಜ ನಿರ್ಮಾಣ ಕಾರ್ಯದಲ್ಲಿ ಟೊಂಕಕಟ್ಟಿ ನಿಂತಿರುವ ಪೌರ ಕಾರ್ವಿುಕರು, ಸಿಬ್ಬಂದಿ ಕಾರ್ಯ ಶ್ಲಾಘನೀಯ. ನೀವು ಸಹ ಆರೋಗ್ಯದ ಕಡೆಗೆ ಹೆಚ್ಚು ಕಾಳಜಿ ವಹಿಸಬೇಕು’ ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.

ಪುರಸಭೆ ಮುಖ್ಯಾಧಿಕಾರಿ ಆರ್.ಎಂ. ಪಾಟೀಲ ಮಾತನಾಡಿ, ಮನೆ ಮನೆ ಕಸ ಸಂಗ್ರಹ ವಾಹನಗಳ ಕೊರತೆಯಿತ್ತು. ಈಗ 5 ವಾಹನಗಳು ಬಂದಿದ್ದರಿಂದ ಪ್ರತಿ ವಾರ್ಡ್​ನಲ್ಲಿ ನಿತ್ಯ ಸಂಚರಿಸಿ ಕಸ ಸಂಗ್ರಹಿಸಲಾಗುವುದು. ಜನತೆ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ವಾಹನಗಳಿಗೆ ನೀಡಿ ಸಹಕರಿಸಬೇಕು ಎಂದರು.

ಪುರಸಭೆ ಸದಸ್ಯರಾದ ಮಹೇಶ ಹೊಗೆಸೊಪ್ಪಿನ, ಜಯಕ್ಕ ಕಳ್ಳಿ, ವಿಜಯ ಕರಡಿ, ಮಹಾದೇವಪ್ಪ ಅಣ್ಣಿಗೇರಿ, ಗಂಗಾಧರ ಮೆಣಸಿನಕಾಯಿ, ವಿಜಯ ಕುಂಬಾರ, ಫಕೀರೇಶ ರಟ್ಟಿಹಳ್ಳಿ, ನೀಲಪ್ಪ ಹತ್ತಿ, ಶಿವಯೋಗಿ ಅಂಕಲಕೋಟಿ, ದುಂಡೇಶ ಕೊಟಗಿ, ಪ್ರವೀಣ ಬೊಮಲೆ, ಸುರೇಶ ಹಟ್ಟಿ, ಗೋವಿಂದಪ್ಪ ಶರಸೂರಿ, ಜೆ.ಆರ್. ಪುರಾಣಿಕಮಠ, ಪುರಸಭೆ ಅಧಿಕಾರಿಗಳಾದ ಆನಂದ ಬದಿ, ಮಂಜುನಾಥ ಮುದಗಲ್ಲ, ಬಸವಣ್ಣೆಪ್ಪ ನಂದೆಣ್ಣವರ ಇದ್ದರು.