Oplus_131072 
ಜಿಲ್ಲೆ

ತ್ಯಾಗದಿಂದ ಸಮಾಜದ ಸಾತ್ವಿಕ ವೈಭವ

ಬಸವಕಲ್ಯಾಣ: ನಾವು ಮಾಡುವ ಪ್ರತಿ ಕೆಲಸ ಕಾರ್ಯಗಳಲ್ಲಿ ತ್ಯಾಗ ಮತ್ತು ಸೇವೆ ಅಳವಡಿಸಿಕೊಂಡಾಗ ಅದು ಸತ್ಕಾರ್ಯವಾಗಿ ಮಾರ್ಪಡುತ್ತದೆ ಎಂದು ಹಾರಕೂಡದ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.

ಹಾರಕೂಡ ಶ್ರೀಮಠದಲ್ಲಿ ಮುಂಬೈ ಹಾಗೂ ವಾಪಿ ಮಹಾನಗರದ ಹಾರಕೂಡ ಶ್ರೀಮಠದ ಭಕ್ತರಿಂದ ಆಯೋಜಿಸಿದ್ದ ಗುರುವಂದನೆ ಹಾಗೂ ೭೩೩ನೇ ತುಲಾಭಾರ ಸೇವೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀಗಳು, ತ್ಯಾಗ ಮತ್ತು ಸೇವೆಯಿಂದ ಸಮಾಜದ ಸಾತ್ವಿಕ ವೈಭವ ವೃದ್ಧಿಸುತ್ತದೆ. ತ್ಯಾಗ ಮತ್ತು ಸೇವೆ ಮನುಷ್ಯರಲ್ಲಿ ಸಹಜವಾಗಿ ಬೆಳೆದು ಬರಬೇಕಾದ ಅಮೂಲ್ಯ ಗುಣಗಳಾಗಿವೆ. ಅರ್ಥಹೀನ ಕನಸುಗಳನ್ನು ತೊರೆದು ಪ್ರತಿಯೊಬ್ಬರೂ ಸುಂದರ ಸಮಾಜದ ಹೊಣೆಗಾರಿಕೆಯನ್ನು ಅರಿತಾಗ, ಬದುಕಿನ ಧನ್ಯತೆ ಫಲಿಸುತ್ತದೆ ಎಂದರು.

ಭೀಮಾಶಂಕರ ಮೂಲಗೆ ಮಾತನಾಡಿದರು.ಬಸವರಾಜ ಪಾಟೀಲ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.

ಮೇಘರಾಜ ನಾಗರಾಳೆ, ಬಿ.ಕೆ.ಹಿರೇಮಠ, ಮಲ್ಲಿನಾಥ, ಪಂಡಿತರಾವ ಪಾಟೀಲ್, ಮಹಾಂತಪ್ಪ ಶ್ರೀಚಂದ, ವಿಜಯಕುಮಾರ ಪಾಟೀಲ್, ರವಿ ಬಿರಾದಾರ, ಚಂದ್ರಕಾಂತ ಪೋಸ್ತೆ, ಚಂದ್ರಕಾಂತ ಬೊಂಬೆಲೆ, ಗೌರಿಶಂಕರ ಬಿರಾದಾರ, ಚಂದ್ರಕಾಂತ ಯಳವಂತಗಿ, ಮಹಾದೇವ ಸಂತಾಜಿ, ಬಸವರಾಜ ದರ್ಜಿ, ರಾಮಚಂದ್ರ ಯಲದಗುಂಡಿ, ಶರಣಪ್ಪ ಜಂಬಗಾ, ಗೌರಿಶಂಕರ ಬಿರಾದಾರ ಇತರರಿದ್ದರು.

ಶಿವಾನಂದ ಪೂಜಾರಿ ನಿರೂಪಣೆ ಮಾಡಿದರು. ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು.