ಹುಕ್ಕೇರಿ: ಸ್ವಾತಂತ್ರ‍್ಯಕ್ಕಾಗಿ ಪ್ರಾಣ ಬಲಿದಾನ ಮಾಡಿದ ಮಹನೀಯರ ಕನಸು ನನಸು ಮಾಡುವುದು ವಿದ್ಯಾರ್ಥಿಗಳ ಹೊಣೆಗಾರಿಕೆಯಾಗಿದೆ ಎಂದು ಮಹಾವೀರ ಸಮೂಹ ಸಂಸ್ಥೆಗಳ ಅಧ್ಯಕ್ಷ ಮಹಾವೀರ ನಿಲಜಗಿ ಹೇಳಿದರು.
ಪಟ್ಟಣದ ಮಹಾವೀರ ಶಿಕ್ಷಣ ಸಂಸ್ಥೆ ಆವರಣದಲ್ಲಿ ಶುಕ್ರವಾರ ೭೯ನೇ ಸ್ವಾತಂತ್ರ‍್ಯೊತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಬದಲಾವಣೆ ತರಲು ಸಿಕ್ಕಿರುವ ಅವಕಾಶ ಬಳಸಿ ಸದೃಢ ಸಮಾಜ ನಿರ್ಮಾಣದೊಂದಿಗೆ ಆರೋಗ್ಯಯುತ ಜೀವನ ನಡೆಸಬೇಕು ಎಂದರು.
ಮಾಜಿ ಹಾಗೂ ಹಾಲಿ ಸೈನಿಕರಾದ ಬಾಳಪ್ಪ ಗೋಕಾರ, ಜಿನ್ನಪ್ಪ ಚೌಗಲಾ, ಶಿವಲಿಂಗಯ್ಯ ಮಠಪತಿ, ಈರಪ್ಪ ಕಂಬಾರ, ಕಾಡಪ್ಪ ಹಣಜ್ಯಾನಟ್ಟಿ, ಮಂಜುನಾಥ ತಳವಾರ, ಭೀಮಪ್ಪ ಪಂಚಪ್ಪಗೋಳ, ಈರಪ್ಪ ಕಂಬಾರ, ಮಲ್ಲಪ್ಪ ಡಾಳೆ, ಬಸವರಾಜ ಕಂಬಾರ ಅವರನ್ನು ಶಿಕ್ಷಣ ಸಂಸ್ಥೆ ಮತ್ತು ಮಹಾವೀರ ಉದ್ಯೋಗ ಸಮೂಹ ವತಿಯಿಂದ ಅಧ್ಯಕ್ಷ ಮಹಾವೀರ ನಿಲಜಗಿ ಅವರು ಸತ್ಕರಿಸಿದರು. ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಪ್ರಜ್ವಲ ನಿಲಜಗಿ, ಸಹ ಕಾರ್ಯದರ್ಶಿ ಸಂಜಯ ನಿಲಜಗಿ, ಸಹಕಾರಿ ನಿರ್ದೇಶಕ ಬಾಹುಬಲಿ ಸೊಲ್ಲಾಪುರೆ. ಮುಖ್ಯಶಿಕ್ಷಕ ಸಂಗಮೇಶ ಕರಹೊನ್ನವರ ಇತರರಿದ್ದರು. ಎಸ್.ಎ.ಕೋಳಿ ಸ್ವಾಗತಿಸಿದರು. ಅಂಜನಾ ಗುಗ್ಗಳಿ ನಿರೂಪಿಸಿದರು. ರಾಘವೇಂದ್ರ ತಳವಾರ ವಂದಿಸಿದರು.