ಯಲಬುರ್ಗಾ: 9 ತಿಂಗಳು ಹೊತ್ತು ಹೆತ್ತು ಸಲಹುವ ತಾಯಿ, ಶಾಲೆಯಲ್ಲಿ ಮಗುವಿನ ಹೆಸರು ನಮೂದಿಸುವಾಗ ತಂದೆಯ ಹೆಸರು ಬರೆಸುತ್ತಾಳೆ. ಅಂತಹ ತ್ಯಾಗಮಯಿ ಗುಣ ಇರುವುದು ಮಹಿಳೆಯರಿಗಷ್ಟೇ. ಹೀಗಾಗಿ ಶಿಶುಪಾಲನ ಕೇಂದ್ರಕ್ಕೆ ಕೇರ್ ಟೇಕರ್‌ಗಳಾಗಿ ಮಹಿಳೆಯರನ್ನೇ ಆಯ್ಕೆ ಮಾಡಲಾಗಿದೆ ಎಂದು ತಾಪಂ ಆಡಳಿತಾಧಿಕಾರಿ ಮಲ್ಲಪ್ಪ ತೊದಲಬಾಗಿ ಹೇಳಿದರು.
ಇಲ್ಲಿನ ತಾಪಂ ಸಾಮರ್ಥ್ಯ ಸೌಧದಲ್ಲಿ ಯಲಬುರ್ಗಾ-ಕುಕನೂರು ತಾಲೂಕಿನ ಗ್ರಾಪಂ ಶಿಶುಪಾಲನ ಕೇಂದ್ರದ ಕೇರ್ ಟೇಕರ್‌ಗಳಿಗೆ ಗುರುವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಶುಪಾಲನ ಕೇಂದ್ರಕ್ಕೆ ಬರುವ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತಾಪಂ ಇಒ ಸಂತೋಷ್ ಪಾಟೀಲ್, ಸಿಡಿಪಿಒ ಸಿಂಧೂ ಎಲಿಗಾರ, ಮೇಲ್ವಿಚಾರಕರಾದ ಜಯಲಕ್ಷ್ಮೀ, ಪ್ರೇಮಲತಾ, ತರಬೇತುದಾರರಾದ ಭೀಮಣ್ಣ ಹವಳಿ, ಐಇಸಿ ಸಂಯೋಜಕ ಶರಣಪ್ಪ ಹಾಳಕೇರಿ ಇತರರಿದ್ದರು.