ಜಿಲ್ಲೆ

ತ್ರಿಪದಿ ಕವಿ ಸರ್ವಜ್ಞರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಎಸ್.ವಿ.ಸಂಕನೂರ

Gadag - Shivanand Hiremath

ಗದಗ: ತ್ರಿಪದಿ ಕವಿ ಸರ್ವಜ್ಞ ತಮ್ಮ ತತ್ವಾದರ್ಶಗಳ ಮೂಲಕ ಸಮಾಜವನ್ನು ತಿದ್ದುವ ಕಾರ್ಯ ಮಾಡಿದಂತಹ ಮಹಾನ ತತ್ವಜ್ಞಾನಿಯಾಗಿದ್ದು, ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಲು ವಿಧಾನ ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ ಹೇಳಿದರು.

ಜಿಲ್ಲಾಡಳಿತ ಭವನದಲ್ಲಿ ಗುರುವಾರ (ಫೆ.20) ಜರುಗಿದ ತ್ರಿಪದಿ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ತ್ರಿಪದಿ ಕವಿ ಸರ್ವಜ್ಞರ ಭಾವಚಿತ್ರಕ್ಕೆ ಪುಷ್ಪ ನಮನ ಸಮರ್ಪಿಸಿ ಅವರು ಮಾತನಾಡಿದರು.
ಯಾವುದೇ ವ್ಯಕ್ತಿ ದೇಶದ, ಸಮಾಜದ ಉದ್ಧಾರಕ್ಕಾಗಿ, ಸಮಾಜದ ಕಲ್ಯಾಣಕ್ಕಾಗಿ ಬದುಕಿ ತ್ಯಾಗ ಮಾಡಿದಂತಹವರ ಜಯಂತಿಯನ್ನು ಆಚರಿಸಲಾಗುತ್ತದೆ. ಕವಿ ಸರ್ವಜ್ಞ ಅವರು ತಮ್ಮ ವಚನಗಳ ಮೂಲಕ ಸಮಾಜ ತಿದ್ಧುವ ಕಾರ್ಯ ಮಾಡಿದಂತಹ ಮಹಾನುಭಾವರಾಗಿದ್ದಾರೆ ಎಂದರು.
ತ್ರಿಪದಿ ಕವಿ ಸರ್ವಜ್ಞ ಎಲ್ಲರ ಉದ್ಧಾರಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು. ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎಂಬ ತತ್ವದಂತೆ ಕಾಯಕಕ್ಕೆ ಹೆಚ್ಚಿನ ಮಹತ್ವ ನೀಡಿದ್ದು ಪ್ರತಿಯೊಬ್ಬರು ತಮ್ಮ ತಮ್ಮ ಕಾಯಕ ಮಾಡುವಂತೆ ಹೇಳಿದ್ದಾರೆ ಎಂದರು. ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಎಂಬ ತತ್ವದಂತೆ ತ್ರಿಪದಿ ಕವಿ ಸರ್ವಜ್ಞ ಅವರು ತಮ್ಮ ಕಾಯಕದ ಮೂಲಕ ಸಂಪಾದಿಸಿದ ಒಂದು ಭಾಗವನ್ನು ದಾಸೋಹಕ್ಕಾಗಿ ದೇಣಿಗೆ ನೀಡುತ್ತಿದ್ದರು. ಅನ್ನ ದೇವರಕ್ಕಿಂತ ಮಿಗಿಲಾದ ದೇವರಿಲ್ಲ , ಕೊಟ್ಟಿದ್ದು ತನಗೆ ಬಚ್ಟಿಟ್ಟಿದ್ದು ಪರರಿಗೆ ಎಂಬ ಹಲವಾರು ಸಂದೇಶಗಳನ್ನು ಸಮಾಜಕ್ಕೆ ನೀಡಿದ್ದು ಸರ್ವಜ್ಞರ ಸಂದೇಶಗಳAತೆ ಪ್ರತಿಯೊಬ್ಬರು ಸಾಗುವ ಮೂಲಕ ಉತ್ತಮ ಸಮಾಜ, ಸಧೃಡ ರಾಷ್ಟç ನಿರ್ಮಾಣಕ್ಕೆ ಮುಂದಾಗುವAತೆ ವಿಧಾನ ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ ಕರೆ ನೀಡಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಅಕ್ಬರಸಾಬ್ ಬಬರ್ಚಿ, ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ, ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ಸಹಾಯಕ ನಿರ್ದೆಶಕ ವೀರಯ್ಯಸ್ವಾಮಿ ಹಿರೇಮಠ, ಕುಂಬಾರ ಸಮಾಜದ ಅಧ್ಯಕ್ಷರಾದ ಶಿವಾನಂದ ಚಕ್ರಸಾಲಿ ಸೇರಿದಂತೆ ಸಮಾಜದ ಗಣ್ಯರು, ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.