ಜಿಲ್ಲೆ

ತೌಕ್ತೇ ಚಂಡಮಾರುತದ ಪರಿಣಾಮ, ಬೆಳ್ತಂಗಡಿ ನದಿ, ತೊರೆಗಳಲ್ಲಿ ನೀರು ನಾಯಿ ಹಿಂಡು ಪತ್ತೆ

reportermng

ಮಂಗಳೂರು: ತೌಕ್ತೇ ಚಂಡಮಾರುತದ ಪರಿಣಾಮ ಬೆಳ್ತಂಗಡಿ ತಾಲೂಕಿನಲ್ಲಿ ನೀರು ನಾಯಿಗಳು ಪತ್ತೆಯಾಗಿವೆ.

ಗರ್ಡಾಡಿ ಗ್ರಾಮದ ಕಂಬಳಬೆಟ್ಟು ಗುತ್ತು ಫಲ್ಗುಣಿ ನದಿ ಸಂಪರ್ಕ ವಾಗುವ ತೊರೆಯಲ್ಲಿ ನೀರು ನಾಯಿಗಳ ಹಿಂಡು ಕಂಡು ಬಂದಿದೆ. ಇದನ್ನು ನೋಡಲು ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು.

ನೀರು ನಾಯಿಗಳು ಹಿಂಡು ಹಿಂಡಾಗಿ ನೀರಿನಲ್ಲಿ ಚಲಿಸುತ್ತಿದ್ದು, ಚಂಡಮಾರುತದ ಪರಿಣಾಮ ಫಲ್ಗುಣಿ ನದಿ ಮೂಲಕ ಇಲ್ಲಿ ಬಂದಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಶಂಕಿಸಿದ್ದಾರೆ.