ಅಕ್ಕನಹಳ್ಳಿ ಗ್ರಾಮದ ಶ್ರೀ ಕಂಬದ ನರಸಿಂಹ ಸ್ವಾಮಿ, ಶ್ರೀ ಜೋಡಿ ಬಸವೇಶ್ವರ ಸ್ವಾಮಿ, ಶ್ರೀ ಉಡಸಲಮ್ಮ ದೇವಿಯ ದೇಗುಲಗಳ ಲೋಕಾರ್ಪಣೆಯ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಸಿ.ಎನ್. ಬಾಲಕೃಷ್ಣ ಅವರಿಗೆ ದೇವಾಲಯದ ಜೀರ್ಣೋದ್ಧಾರ ಸಮಿತಿಯ ಸದಸ್ಯರು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು. ಎ.ಪಿ.ಉಮೇಶ್, ಎನ್.ಪರಮೇಶ್, ಪುಟ್ಟರಾಜು, ಎ.ಟಿ.ರವಿ, ದಯಾನಂದ್, ದರ್ಶನ್ ಪಟೇಲ್, ಗಣೇಶ್, ರಾಮೇಗೌಡ, ರಾಮಚಂದ್ರ, ದಿಲೀಪ್, ಸುರೇಶ್ ಇದ್ದರು. 
ಜಿಲ್ಲೆ

ತೋಟಿ ಏತ ನಿರಾವರಿ ಶೀಘ್ರ ಪೂರ್ಣ

ನುಗ್ಗೇಹಳ್ಳಿ: ತೋಟಿ ಏತ ನಿರಾವರಿ ಯೋಜನೆಯ 900 ಮೀ. ಪೈಪ್‌ಲೈನ್ ಕಾಮಗಾರಿ ಗುತ್ತಿಗೆದಾರನ ನಿರ್ಲಕ್ಷೃದಿಂದ ವಿಳಂಬವಾಗಿದೆ. ಕೂಡಲೇ ಕಾಮಗಾರಿ ಪೂರ್ಣಗೊಳಿಸಿ ಈ ಹಂಗಾಮಿನಲ್ಲಿ ನೀರು ಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.

ಹೋಬಳಿಯ ಅಕ್ಕನಹಳ್ಳಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಕಂಬದ ನರಸಿಂಹಸ್ವಾಮಿ ಶ್ರೀ ಜೋಡಿ ಬಸವೇಶ್ವರಸ್ವಾಮಿ ಶ್ರೀ ಉಡಸಲಮ್ಮ, ದೇಗುಲಗಳ ಲೋಕಾರ್ಪಣೆಯ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಕ್ಕನಹಳ್ಳಿ, ಬದ್ದಿಕೆರೆ, ಹೆಬ್ಬಾಳಲು, ಸೋಸಲಗೆರೆ, ಬಾಣನಕೆರೆ, ಸಮುದ್ರಳ್ಳಿ, ಮುದ್ದನಹಳ್ಳಿ, ಮಾದಲಗೆರೆ, ಹುಲಿಕೆರೆ, ಕಗ್ಗೆರೆ, ರಾಜಪುರ, ಮಟ್ಟನವಿಲೆ, ದೊಡ್ಡೇರಿ, ಹೊನ್ನೇನಹಳ್ಳಿ, ಮೇಟಿಕೆರೆ, ಕಾವಲುಹೊಸೂರು, ಕೆರೆಗಳಿಗೆ ಹೇಮಾವತಿ ನದಿ ನೀರು ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಗುತ್ತಿಗೆದಾರನ ನಿರ್ಲಕ್ಷೃಕ್ಕೆ ಶೋಕಾಸ್ ನೋಟಿಸ್ ಕೊಡಿಸಲಾಗಿದೆ. ಸ್ಪೀಕರ್ ಅವರು ಅಧಿಕಾರಿಗಳಿಂದ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಹಳ್ಳಿಗಳಲ್ಲಿ ಶಾಂತಿ ನೆಮ್ಮದಿ ನೆಲೆಸಲು ಗ್ರಾಮಸ್ಥರು ಒಗ್ಗಟ್ಟಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುವ ಮೂಲಕ ನೆಮ್ಮದಿ ಕಂಡುಕೊಳ್ಳಬೇಕು ಎಂದರು. ಗ್ರಾಮಕ್ಕೆ ಸಮುದಾಯ ಭವನ, ಡೈರಿ ಕಟ್ಟಡ ನಿರ್ಮಿಸಿಕೊಡಲಾಗಿದ್ದು, ಕೆರೆ ಕೆಳಗಿನ ರಸ್ತೆ ಸಹ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎ.ಪಿ. ಉಮೇಶ್, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎನ್.ಪರಮೇಶ್, ಗ್ರಾಪಂ ಸದಸ್ಯ ಪುಟ್ಟರಾಜು ಇಒ ಲಾಯರ್ ದರ್ಶನ ಪಟೇಲ್, ಕೃಷಿ ಪತ್ತಿನ ಸಂಘದ ನಿರ್ದೇಶಕ ದಯಾನಂದ್, ದಿಲೀಪ್, ಮಾವಿನಹಳ್ಳಿ ಸುರೇಶ್, ರಾಮಚಂದ್ರು, ಗಣೇಶ್, ರಾಮೇಗೌಡ, ನಂಜೇಗೌಡ ಕಿಶೋರ್ ನಾಗರಾಜ್ ಮಂಜೇಗೌಡ, ರುದ್ರಸ್ವಾಮಿ, ಶ್ರೀಧರ್, ಮೋಹನ್, ಗ್ರಾಮಸ್ಥರು ಇತರರು ಇದ್ದರು.