ಜಿಲ್ಲೆ

ತೋಟಗಾರಿಕೆ ವಿಶ್ವವಿದ್ಯಾಲಯ ಸ್ಥಾಪಿಸಿ

ಕಲಬುರಗಿ: ಆಳಂದ ಅಥವಾ ಅಫಜಲಪುರ ತಾಲೂಕಿನಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯ ಸ್ಥಾಪಿಸುವಂತೆ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ್ ಧಂಗಾಪುರ ಆಗ್ರಹಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ಅಂಕಿ-ಸಂಖ್ಯೆ ಪ್ರಕಾರ ಜಿಲ್ಲೆಯ ೨೩ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತಿದೆ. ಈ ಪೈಕಿ ೫೫ ಸಾವಿರ ಹೆಕ್ಟೇರ್ ಹಣ್ಣು, ೧೩ ಸಾವಿರ ಹೆಕ್ಟೇರ್ ತರಕಾರಿ, ೨೫೦೦ ಹೆಕ್ಟೇರ್ ಸಾಂಬಾರ ಬೆಳೆ ಮತ್ತು ೧೨೦೦ ಹೆಕ್ಟೇರ್‌ನಲ್ಲಿ ಹೂ ಬೆಳೆಯಲಾಗುತ್ತಿದೆ. ಆದರೂ ನೆರೆಯ ಮಹಾರಾಷ್ಟç, ಆಂಧ್ರ, ತೆಲಂಗಾಣದಿAದ ತರಕಾರಿ, ಹೂ ತರಿಸುತ್ತಿರುವುದು ಸರಿಯಲ್ಲ. ಜಿಲ್ಲೆಯಲ್ಲೇ ಪೇರಲ, ನೇರಳೆ, ನಿಂಬೆ, ದ್ರಾಕ್ಷಿ, ಸೀತಾಫಲ, ಕೆಂಪುಬಾಳೆ, ಗುಲಾಬಿ, ಸೇವಂತಿ, ಸುಗಂಧರಾಜ ಹೂ ಬೆಳೆ ಬೆಳೆಯಲು ಸಾಕಷ್ಟು ಅವಕಾಶವಿದೆ. ಆಳಂದ ಅಥವಾ ಅಫಜಲಪುರದಲ್ಲಿ ತೋಟಗಾರಿಕೆ ವಿವಿ ಸ್ಥಾಪಿಸುವಂತೆ ಈ ಹಿಂದಿನ ಸರ್ಕಾರಕ್ಕೆ ಕೋರಲಾಗಿತ್ತು. ಇದೀಗ ತಮ್ಮ ಸರ್ಕಾರ ಅಧಿಕಾರದಲ್ಲಿದ್ದು, ಹಿಂದುಳಿದ ಪ್ರದೇಶದ ಈ ಬೇಡಿಕೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.