ಜಿಲ್ಲೆ

ತೋಟಗಾರಿಕೆ ಅಧಿಕಾರಿ ಶವ ಕೆರೆಯಲ್ಲಿ ಪತ್ತೆ

ಕೆ.ಆರ್.ಪೇಟೆ: ತಾಲೂಕು ತೋಟಗಾರಿಕೆ ಅಧಿಕಾರಿ ಡಾ.ಆರ್.ಜಯರಾಂ(51) ಅವರ ಶವ ಕೆರೆಯಲ್ಲಿ ಪತ್ತೆಯಾಗಿದೆ.

ತೋಟಗಾರಿಕೆ ಇಲಾಖೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಸೋಮವಾರ ರಾತ್ರಿ 9ಗಂಟೆಗೆ ಮನೆಯಿಂದ ಹೊರ ಹೋಗಿದ್ದ ಜಯರಾಂ ಮನೆಗೆ ಹಿಂದಿರುಗಿರಲಿಲ್ಲ. ಅವರ ಬೈಕ್ ಪಟ್ಟಣದ ದೇವೀರಮ್ಮಣ್ಣಿ ಕೆರೆಯ ಬಸವಣ್ಣನ ದೇವಾಲಯದ ಬಳಿ ಪತ್ತೆಯಾಗಿತ್ತು. ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಿ ಮಂಗಳವಾರ ದಿನವಿಡೀ ಅಗ್ನಿಶಾಮಕ ಸಿಬ್ಬಂದಿ ಈಜು ಮತ್ತು ಮುಳುಗು ತಜ್ಞರೊಂದಿಗೆ ಹುಡುಕಾಟ ನಡೆಸಿದ್ದರೂ ಸಹ ಪತ್ತೆಯಾಗಿರಲಿಲ್ಲ. ಆದರೆ, ಬುಧವಾರ ಬೆಳಗ್ಗೆ ಕೆರೆಯಲ್ಲಿ ಜಯರಾಂ ಅವರ ಶವ ಪತ್ತೆಯಾಗಿದೆ.

ಕೆ.ಆರ್.ಪೇಟೆ ಪಟ್ಟಣ ಠಾಣೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಶವವನ್ನು ನೀರಿನಿಂದ ಮೇಲೆತ್ತಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಿದರು.