ಶೃಂಗೇರಿ: ಕೆರೆ ಗ್ರಾಮ ಪಂಚಾಯಿತಿ ಭಲೆಕಡಿ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ತೋಟ ಧ್ವಂಸಗೊಂಡಿದೆ.
ಹುಲ್ಗಾರ್‌ಬೈಲು ನಾಗೇಶ ಗೌಡ ಅವರ ತೋಟಕ್ಕೆ ಸೋಮವಾರ ರಾತ್ರಿ ಆನೆ ದಾಳಿ ಮಾಡಿದ್ದು, ಅಡಕೆ, ಬಾಳೆಗಿಡಗಳನ್ನು ಸಂಪೂರ್ಣ ಧ್ವಂಸ ಮಾಡಿದೆ. ಕೆಲವು ತಿಂಗಳಿಂದ ಆಗಾಗ ಕಾಡಾನೆ ಕಾಣಿಸಿಕೊಳ್ಳುತ್ತಿದ್ದು, ಆನೆ ಸುತ್ತಾಟದಿಂದ ಗ್ರಾಮಸ್ಥರು ತೋಟಕ್ಕೆ ಕೆಲಸಕ್ಕೆ ತೆರಳುವುದಕ್ಕೆ ಹೆದರುತ್ತಿದ್ದಾರೆ. ಅರಣ್ಯ ಇಲಾಖೆ ಕಾಡಾನೆ ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.