ಕುಶಾಲನಗರ : ಕುಶಾಲನಗರ ತಾಲೂಕು ತೊರೆನೂರು ವಿರಕ್ತ ಮಠದ ಸಂಸ್ಥಾಪಕ, ಲಿಂಗೈಕ್ಯ ಶ್ರೀ ಮರುಳ ಸಿದ್ದೇಶ್ವರ ಸ್ವಾಮಿ ಹಾಗೂ ಶ್ರೀ ಮಹಾಂತ ಸ್ವಾಮೀಜಿ 13ನೇ ಪುಣ್ಯ ಸಂಸ್ಮರಣೋತ್ಸವ, ತಪೋಕ್ಷೇತ್ರ ಮನೆಹಳ್ಳಿ ಶ್ರೀ ಗುರುಸಿದ್ದ ವೀರೇಶ್ವರ ಸ್ವಾಮೀಜಿ ಪೂಜಾ ಕಾರ್ಯಕ್ರಮ ಭಾನುವಾರ ತೊರೆನೂರು ವಿರಕ್ತ ಮಠದಲ್ಲಿ ನೆರವೇರಿತು. ಕಾರ್ಯಕ್ರಮದ ಅಂಗವಾಗಿ ಮಠದ ಆವರಣದಲ್ಲಿರುವ ಲಿಂಗೈಕ್ಯ ಸ್ವಾಮಿಗಳ ಗದ್ದುಗೆಗೆ ಬೆಳಗ್ಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾ ಮಂಗಳಾರತಿ ಪೂಜಾ ಕೈಂಕರ್ಯಗಳು ನಡೆದವು. ಪೂಜೋತ್ಸವ ನಂತರ ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಿತು.
ಸಮಾಜ ಬಾಂಧವರನ್ನು ಉದ್ದೇಶಿಸಿ ಮಾತನಾಡಿದ ವೀರಶೈವ ಲಿಂಗಾಯತ ಮಹಾಸಭಾ ಕೊಡಗು ಅಧ್ಯಕ್ಷ ಎಚ್.ವಿ. ಶಿವಪ್ಪ, ಮಠ ಹಾಗೂ ಭಕ್ತರ ನಡುವಿನ ಸಂಬಂಧ ವೃದ್ಧಿಗೊಳಿಸಲು ಸನ್ನಿಧಿಯಲ್ಲಿ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅವಶ್ಯಕತೆಯಿದೆ ಎಂದರು.
ಜಾಗೃತಿ ಅಗತ್ಯ : ತಪೋವನ ಕ್ಷೇತ್ರದ ಮನೆಹಳ್ಳಿ ಮಠದ ಮಹಾಂತ ಶ್ರೀ ಶಿವಲಿಂಗ ಸ್ವಾಮೀಜಿ ಮಾತನಾಡಿ, ಮನೆ, ಮಠದ ಬಗ್ಗೆ ಸದಾ ಜಾಗೃತಿ ಅಗತ್ಯ ಎಂದರು. ಅನವಶ್ಯಕ ವಿಚಾರ ಬದಿಗೊತ್ತಿ ಧಾರ್ಮಿಕ ಕೈಂಕರ್ಯಗಳಿಗೆ ಇಲ್ಲಿ ಒತ್ತು ನೀಡಬೇಕು. ಸಮುದಾಯದವರು. ಮಠದ ಅಭಿವೃದ್ಧಿ, ಸೇವಾ ಕಾರ್ಯಗಳಿಗೆ ಕೈಜೋಡಿಸಬೇಕಿದೆ. ಮಠಕ್ಕಾಗಿ ಸಮಯ ಮೀಸಲಿಡಬೇಕಿದೆ ಎಂದರು. ತೊರೆನೂರು ವಿರಕ್ತ ಮಠದ ಶ್ರೀಮಲ್ಲೇಶ ಸ್ವಾಮೀಜಿ ಮಾತನಾಡಿ, ಮಠದ ಅಭಿವೃದ್ಧಿ ಹಾಗೂ ಸೇವೆಯಲ್ಲಿ ಕೇವಲ ಬೆರಳೆಣಿಕೆಯಷ್ಟು ಜನರ ಕೊಡುಗೆ ಇ