ಪಾಂಡವಪುರ: ತಾಲೂಕಿನ ತೊಣ್ಣೂರು ಕೆರೆ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು ದಂಪತಿ ಸಮೇತ ಶುಕ್ರವಾರ ಕೆರೆಗೆ ಬಾಗಿನ ಅರ್ಪಿಸಿ ಪೂಜೆ ಸಲ್ಲಿಸಿದರು.
ಇತ್ತೀಚೆಗೆ ತಾಲೂಕಿನಲ್ಲಿ ಸುರಿದ ಧಾರಾಕಾರ ಮಳೆಗೆ ತೊಣ್ಣೂರು ಕೆರೆಯಲ್ಲಿ ಅಪಾರ ನೀರು ಸಂಗ್ರಹವಾಗುವ ಜತೆಗೆ ಕೋಡಿ ಬಿದ್ದು ಸಾಕಷ್ಟು ಅನಾಹುತ ಸೃಷ್ಟಿಸಿತ್ತು. ಈಗ 2 ಕೋಟಿ ರೂ. ಅನುದಾನದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿ ಮಾಡಲಾಗಿದೆ. ತೊಣ್ಣೂರು ಕೆರೆಯಲ್ಲಿ ನೀರು ಹೆಚ್ಚಿನ ರೀತಿಯಲ್ಲಿ ಸಂಗ್ರಹವಾದರೆ ಸ್ವಯಂಚಾಲಿತವಾಗಿ 3 ಸಾವಿರ ಕ್ಯೂಸೆಕ್ ನೀರು ಹೊರಹೋಗಲು ಯೋಜನೆ ರೂಪಿಸಲಾಗಿದೆ. ಅನಾವೃಷ್ಟಿ ಸಂದರ್ಭದಲ್ಲಿ ಕಾವೇರಿ ನದಿಯಿಂದ ಕೆರೆಗೆ ನೀರು ತುಂಬಿಸುವ ಯೋಜನೆ ಕೂಡ ಪ್ರಗತಿಯ ಹಂತದಲ್ಲಿದೆ. ಇದರಿಂದ ವರ್ಷದ ಎಲ್ಲ ದಿನಗಳಲ್ಲೂ ಕೆರೆಯಲ್ಲಿ ನೀರು ಲಭ್ಯವಿರುತ್ತದೆ ಎಂದರು.
ತಾಪಂ ಲೋಕೇಶ್‌ಮೂರ್ತಿ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮಹೇಶ್, ಬಿಇಒ ಲೋಕೇಶ್, ಹೇಮಾವತಿ ಇಲಾಖೆ ಎಇಇ ಪುಟ್ಟಮಾಯಿಗೌಡ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಪ್ರಿಯದರ್ಶಿನಿ, ಸೆಸ್ಕ್ ಎಇಇ ವಿ.ಪುಟ್ಟಸ್ವಾಮಿ, ಗ್ರಾಪಂ ಅಧ್ಯಕ್ಷೆ ಭಾರತಿ, ಮಾಜಿ ಅಧ್ಯಕ್ಷೆ ಪೂಜಾ, ರಾಜಣ್ಣ ಇತರರು ಇದ್ದರು.