ಚಿಕ್ಕಮಗಳೂರು ತಾಲೂಕು ತೊಗರಿಹಂಕಲ್ ಗ್ರಾಪಂ ಅಧ್ಯಕ್ಷರಾಗಿ ಆಯ್ಕೆಯಾದ ಸಾಧಿಕ್ ಅವರನ್ನು ಸಹಸದಸ್ಯರು ಅಭಿನಂದಿಸಿದರು. ಗ್ರಾಪಂ ಸದಸ್ಯರಾದ ವಿನು ಪ್ರಸಾದ್, ಸೆಲ್ವಿ ಮೆನಜಸ್, ವಿಮಲಾ, ಲಲಿತಾ, ರತ್ನಾ, ಮೇಘನಾ, ದಾವೀದ್, ಸುರೇಶ್, ಮುಸ್ತಾಫ್, ಸವಿತಾ, ಪನ್ನೀರ್ ಮತ್ತಿತರರಿದ್ದರು. 
ಜಿಲ್ಲೆ

ತೊಗರಿಹಂಕಲ್ ಗ್ರಾಪಂಗೆ ಸಾಧಿಕ್ ಅಧ್ಯಕ್ಷ

ನಿತ್ಯಾನಂದ ಎಸ್.ಎನ್.

ಚಿಕ್ಕಮಗಳೂರು: ತಾಲೂಕಿನ ತೊಗರಿಹಂಕಲ್ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸಾದಿಕ್ ಅವರು ಬುಧವಾರ ಚುನಾವಣೆ ಮುಖಾಂತರ ಆಯ್ಕೆಯಾದರು.

ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಾದಿಕ್ ಮತ್ತು ನೀಲಾ ಮೋಹನ್ ಸ್ಫರ್ಧಿಸಿದ್ದರು. ಪಂಚಾಯಿತಿ ಒಟ್ಟು ೧೩ ಸದಸ್ಯರ ಪೈಕಿ ಸಾದಿಕ್ ಪರವಾಗಿ ೧೦ ಹಾಗೂ ನೀಲಾ ಪರವಾಗಿ ೩ ಮತಗಳು ಚಲಾವಣೆಯಾದ ಹಿನ್ನೆಲೆ ಚುನಾವಣಾಧಿಕಾರಿ ಎಚ್.ಸಿ.ರವೀಶ್ ಅವರ ಆಯ್ಕೆಯನ್ನು ಘೋಷಣೆ ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಕೆ.ಆರ್.ಅನಿಲ್‌ಕುಮಾರ್, ಅಮಾವಾಸ್ಯೆ, ಆಶ್ರಫ್, ಗೋಪಾಲ್, ಸಂತೋಷ್ ಪೂಜಾರಿ, ಸೋಮಶೇಖರ್, ಜಯರಾಮ್, ಲೋಕೇಶ್, ಗ್ರಾಪಂ ಸದಸ್ಯರಾದ ವಿನು ಪ್ರಸಾದ್, ಸೆಲ್ವಿ ಮೆನಜಸ್, ವಿಮಲಾ, ಲಲಿತಾ, ರತ್ನಾ, ಮೇಘನಾ, ದಾವೀದ್, ಸುರೇಶ್, ಮುಸ್ತಾಫ್, ಸವಿತಾ, ಪನ್ನೀರ್ ಮತ್ತಿತರರಿದ್ದರು.