ತಾಂಬಾ: ಕಳಪೆ ಬಿತ್ತನೆ ಬೀಜ ವಿತರಣೆ ಹಾಗೂ ಹವಮಾನ ವೈಪರೀತ್ಯ ಯಿಂದಾಗಿ ಸಂಪೂರ್ಣ ಹಾಳಾಗಿರುವ ತೊಗರಿ ಬೆಳೆಗೆ ಪರಿಹಾರ ನೀಡಬೇಕು ಹಾಗೂ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಮಹಾರಾಷ್ಟ್ರದಿಂದ ಭೀಮಾ ನದಿಗೆ ನೀರು ಹರಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾವೇದಿಕೆ ಹಾಗೂ ವಿವಿಧ ಸಂಟನೆಗಳ ಕಾರ್ಯಕರ್ತರು ಬುಧವಾರ ಸಂಗನಬಸವ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ವಿವಿಧ ಭೇಡಿಕೆಗಳ ಮನವಿಪತ್ರವನ್ನು ಇಂಡಿ ಉಪ ತಹಸೀಲ್ದಾರ್ ಆರ್.ಬಿ.ಮೋಗಿ ಅವರಿಗೆ ಸಲ್ಲಸಿದರು.
ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ರಾಯಗೊಂಡ ಪೂಜಾರಿ ಮಾತನಾಡಿ, ಇಂಡಿ ತಾಲೂಕಿನಲ್ಲಿ 1.5ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಶೇ. 90 ರಷ್ಟು ತೊಗರಿ ಬೆಳೆ ಹಾನಿಯಾಗಿದೆ. ಸರ್ಕಾರ ಗಮನ ಹರಿಸಿ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪ್ರಕಾಶ ಮುಂಜಿ, ರಜಾಕ ಚಿಕ್ಕಗಸಿ, ರಾಮಚಂದ್ರ ದೊಡ್ಡಮನಿ, ಮಾಸಿಮ್ ವಾಲಿಕಾರ್, ಬೀರಪ್ಪ ವಗ್ಗಿ, ವಿಠ್ಠಲ ಹೋರ್ತಿ, ರವಿ ನಡುಗಡ್ಡಿ, ಶ್ರೀಧರ ಅವಟಿ, ರಾಕೇಶ ಬಾಗಲಕೋಟೆ, ಮಲ್ಲಿಕಾರ್ಜುನ ದಿವಟಗಿ, ಪ್ರಶಾಂತ ದೇಗಿನಾಳ, ಶರಣು ಕಲ್ಲೂರ, ಶಂಕರ ಗಬಸಾವಳಗಿ, ರಮೇಶ ಚಾಂದಕವಟೆ ಪಾಲ್ಗೊಂಡಿದ್ದರು.