ಕೆಂಭಾವಿ: ಎತ್ತಿನ ಬಂಡಿ ಹೋಗಿ ಸೈಕಲ್ ಬಂತು, ಸೈಕಲ್ ಹೋಗಿ ಮೋಟಾರ್ ಬೈಕ್ ಬಂತು, ಬೈಕ್ ಬಳಿಕ ಟ್ರಾÈಕ್ಟರ್ ಬಂತು. ಈಗ ಟ್ರಾÈಕ್ಟರ್ ಸಹ ಹೋಗಿ ಡ್ರೋನ್ ಬಂದಿದೆ. ಹೌದು ಕಾಲ ಬದಲಾದಂತೆ ಕೃಷಿ ಚಟುವಟಿಕೆಯಲ್ಲೂ ಹಲವಾರು ಬದಲಾವಣೆಗಳನ್ನು ಕಾಣಲಾಗುತ್ತಿದೆ.
ಆಧುನಿಕತೆಗೆ ತಕ್ಕಂತೆ ಜಮೀನು ಹದ ಮಾಡಿ ಬಿತ್ತನೆ, ಗೊಬ್ಬರ, ಕಳೆ ತೆಗೆಯುವುದು, ಕ್ರಿಮಿನಾಶಕ ಸಿಂಪಡಣೆ ಸೇರಿ ಹತ್ತು ಹಲವಾರು ತಂತ್ರಜ್ಞಾನದ ಪ್ರಯೋಗಗಳು ಕೃಷಿ ಕ್ಷೇತ್ರದಲ್ಲಿ ಯಶಸ್ಸು ಕಂಡಿವೆ. ಅಂಥ ಸಾಲಿಗೆ ಈಗ ಡ್ರೋನ್ ಮೂಲಕ ಬೆಳೆಗಳಿಗೆ ಕ್ರಿಮಿನಾಶಕ ಔಷಧ ಸಿಂಪಡಣೆ ಮಾಡಿ ರೈತ ಎಲ್ಲದಕ್ಕೂ ಸೈ ಎನಿಸಿಕೊಂಡಿದ್ದಾನೆ.
ವಲಯದಲ್ಲಿ ವರುಣ ಸಾಕಷ್ಟು ಅನುಕೂಲ ಮಾಡಿಕೊಟ್ಟಿದ್ದು, ತೊಗರಿ ಬಂಪರ್ ಬೆಳೆ ನಿರೀಕ್ಷೆಯಲ್ಲಿ ರೈತರಿದ್ದಾರೆ. ಸಮಯಕ್ಕೆ ಸರಿಯಾಗಿ ಮಳೆ ಬಂದಿದ್ದರಿAದ ತೊಗರಿ ಮನುಷ್ಯನ ಎತ್ತರಕ್ಕೂ ಮೀರಿ ಬೆಳೆದಿದ್ದು, ಕ್ರಿಮಿನಾಶಕ ಸಿಂಪಡಣೆ ಹೇಗೆ ಎಂಬುದು ರೈತರಿಗೆ ದೊಡ್ಡ ಚಿಂತೆಯಾಗಿತ್ತು. ಸಣ್ಣ ಚಕ್ರದ ಟ್ರಾÈಕ್ಟರ್‌ನಿಂದ ಹಲವು ರೈತರು ಔಷಧ ಸಿಂಪಡಣೆ ಮಾಡಿದ್ದಾರೆ.
ಆದರೆ ಟ್ರಾÈಕ್ಟರ್‌ನಿಂದ ಬೆಳೆಗಳಿಗೆ ಹಾನಿಯಾಗುವ ಭೀತಿ ಕಂಡುಕೊAಡ ಕೆಲವರು ಅತಿ ಕಡಿಮೆ ಖರ್ಚು, ಕಮ್ಮಿ ನೀರು ಮತ್ತು ಕಡಿಮೆ ಅವಧಿಯಲ್ಲಿ ಡ್ರೋನ್ ಯಂತ್ರದ ಮೂಲಕ ಔಷಧ ಸಿಂಪಡಿಸಿ ಆಧುನಿಕ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ. ಎಕರೆಗೆ ಕೇವಲ 10 ಲೀಟರ್ ನೀರಿನಲ್ಲಿ ಈ ಡ್ರೋನ್ ಔಷಧ ಸಿಂಪಡಣೆ ಮಾಡುತ್ತದೆ. ಎಕರೆಗೆ 400 ರೂ. ವೆಚ್ಚ ತಗಲುವ ಈ ಆಧುನಿಕತೆಯ ಔಷಧ ಸಿಂಪಡಣೆ ವಿಧಾನ ಹಲವಾರು ರೈತರಿಗೆ ವರದಾನವಾಗಿದೆ.