oppo_2 
ಜಿಲ್ಲೆ

ತೊಗರಿಗಾಗಿ ಕಲಬುರಗಿ ಬಂದ್ 22ರಂದು

ಕಲಬುರಗಿ: ತೊಗರಿ ಬೆಳೆಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು, ಬೆಂಬಲ ಬೆಲೆ ಹೆಚ್ಚಿಸಬೇಕು ಸೇರಿ ವಿವಿಧ ಬೇಡಿಕೆಗೆ ಆಗ್ರಹಿಸಿ ಜ.೨೨ರಂದು ಕಲಬುರಗಿ ಬಂದ್‌ಗೆ ಕರೆ ನೀಡಲಾಗಿದೆ ಎಂದು ರೈತ ಸಂಘಟನೆಗಳ ಸಂಯುಕ್ತ ಹೋರಾಟದ ಮುಖಂಡರು ತಿಳಿಸಿದರು. ರೈತ ಹೋರಾಟಗಾರ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, ಮೂರು ತಿಂಗಳಿAದ ಮನವಿ ಮಾಡುತ್ತಿದ್ದರೂ ರಾಜ್ಯ ಸರ್ಕಾರ ತೊಗರಿ ಬಗ್ಗೆ ನಿರ್ಲಕ್ಷÈ ವಹಿಸುತ್ತಿದೆ. ಆವರ್ಥ ನಿಧಿ ಘೋಷಿಸಬೇಕು, ಪರಿಹಾರ ನೀಡಬೇಕು ಎಂದು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ನೀಡಲಾಗಿತ್ತು. ವರದಿ ತರಿಸಿ ಪರಿಹಾರದ ಚಿಂತನೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ತಿಂಗಳಾದರೂ ಚಕಾರ ಎತ್ತುತ್ತಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕಿಡಿ ಕಾರಿದರು. ತೊಗರಿಗೆ ಬೆಂಬಲ ಬೆಲೆ (ಎಂಎಸ್‌ಪಿ) ಕಾಟಾಚಾರಕ್ಕೆ ನೀಡಿದ್ದು, ಮಾರುಕಟ್ಟೆಗಿಂತ ಕಡಿಮೆ ದರ ನಿಗದಿ ಆಗಿದೆ. ಕೂಡಲೇ ಅದನ್ನು ೧೨,೫೦೦ ರೂ. ಎಂಎಸ್‌ಪಿ ರೂ. ನಿಗದಿ ಮಾಡಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ತೊಗರಿ ಖರೀದಿಯಲ್ಲಿ ನೀಡುತ್ತಿರುವ ದರದಲ್ಲಿ ೫೦೦ ರೂ. ರಾಜ್ಯ ಸರ್ಕಾರ ಹಾಗೂ ೧೦೦೦ ರೂ. ಕೇಂದ್ರ ಸರ್ಕಾರ ಆವರ್ಥ ನಿಧಿ ಘೋಷಿಸಬೇಕು ಎಂದು ಆಗ್ರಹಿಸಿದರು. ಹೋರಾಟಗಾರ ಮೌಲಾಮುಲ್ಲಾ ಮಾತನಾಡಿ, ಎಲ್ಲ ರೈತ ಸೇರಿ ವಿವಿಧ ಸಂಘಟನೆಗಳ ಜತೆ ಚರ್ಚಿಸಿದ್ದು, ಕೇಂದ್ರ ಸರ್ಕಾರ ರೈತ ವಿರೋಧಿ ನೀತಿಗಳನ್ನು ವಾಪಸ್ ಪಡೆಯಬೇಕು. ಪರಿಹಾರ ಘೋಷಿಸಬೇಕು. ರೈತರ ಸಂಕಷ್ಠ ನಿವಾರಣೆಗೆ ಸಾರ್ವಜನಿಕರು ಸಹಕಾರ ನೀಡಬೇಕು. ವಾಣಿಜ್ಯ ಸಂಸ್ಥೆಯವರು, ಕಿರಾಣಿ, ಅಡತ್, ಬಟ್ಟೆ ವ್ಯಾಪಾರಿಗಳು ಬಂದ್‌ಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ವಿವಿಧ ಸಂಘಟನೆಗಳ ನಾಗೇಂದ್ರಪ್ಪ ಥಂಬೆ, ಎಸ್.ಆರ್.ಕೊಲ್ಲೂರ, ಅರ್ಜುನ್ ಗೊಬ್ಬುರ, ಭೀಮಾಶಂಕರ ಮಾಡಿಯಾಳ, ಎಂ.ಬಿ.ಸಜ್ಜನ್, ನಾಗಯ್ಯ ಸ್ವಾಮಿ, ದಿಲೀಪ್ ನಾಗೂರೆ, ಮೊಬಿನ್ ಅಹ್ಮದ್, ಬಾಬು ಹೂವಿನಹಳ್ಳಿ ಇತರರಿದ್ದರು.

ತೊಗರಿ ರೈತರು ಸಂಕಷ್ಟದಲ್ಲಿದ್ದು, ಪರಿಹಾರ ನೀಡಬೇಕಾದ ಸರ್ಕಾರ ಮೌನ ವಹಿಸಿದೆ. ರೈತರಿಗಾಗಿಯೇ ಬಂದ್ ಮಾಡಲು ನಿರ್ಧರಿಸಿದ್ದು, ಜಿಲ್ಲೆಯ ಎಲ್ಲ ರೈತರು ನಗರಕ್ಕೆ ಆಗಮಿಸಿ ಬಂದ್‌ಗೆ ಬೆಂಬಲ ನೀಡಬೇಕು. ಆಗ ಮಾತ್ರ ಸರ್ಕಾರ ಮಣಿಯುತ್ತದೆ. | ನಾಗೇಂದ್ರಪ್ಪ ಥಂಬೆ ಜಿಲ್ಲಾಧ್ಯಕ್ಷ ರೈತ ಸಂಘ