ಜಿಲ್ಲೆ

ತೈಲ ಬೆಲೆ ಏರಿಕೆ ಹಿಂಪಡೆಯಿರಿ

ಚಿತ್ರದುರ್ಗ: ರಾಜ್ಯ ಸರ್ಕಾರ ತೈಲ ಬೆಲೆ ಏರಿಕೆ ಮಾಡಿರುವುದನ್ನು ಕೂಡಲೇ ಹಿಂಪಡೆಯಬೇಕೆಂದು ಒತ್ತಾಯಿಸಿ ಜಯಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಬುಧವಾರ ಜಿಲ್ಲಾಡಳಿತದ ಮೂಲಕ ಸಿಎಂಗೆ ಮನವಿ ರವಾನಿಸಿದರು.

ಪೆಟ್ರೋಲ್ ಲೀಟರ್‌ಗೆ 3 ರೂ., ಡೀಸೆಲ್ ಲೀಟರ್‌ಗೆ 3.5 ರೂ. ಏರಿಸಿದ್ದು, ಬಡವರು, ರೈತರು, ಜನಸಾಮಾನ್ಯರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಬರೆ ಎಳೆದಿದೆ ಎಂದು ಬೇಸರಿಸಿದರು.

ಸರ್ಕಾರದ ನಡೆಯಿಂದ ಪ್ರಯಾಣ, ಸಾಗಾಣೆ ವೆಚ್ಚ ಹೆಚ್ಚಳವಷ್ಟೇ ಅಲ್ಲ. ಅಗತ್ಯ ವಸ್ತುಗಳ ಬೆಲೆಗಳೂ ಏರಿಕೆಯಾಗುತ್ತಿವೆ. ಹೀಗಾಗಿ ನಿರ್ಧಾರ ಹಿಂಪಡೆಯಬೇಕು ಎಂದು ಕೋರಿದರು.

ವೇದಿಕೆ ಅಧ್ಯಕ್ಷ ಬಿ.ಟಿ.ರಾಜೇಂದ್ರ, ಉಪಾಧ್ಯಕ್ಷ ಸಿದ್ದೇಶ್ವರ, ಪದಾಧಿಕಾರಿಗಳಾದ ಸಿ.ಅಭಿಲಾಷ್, ಬಿ.ಅಶೋಕ್, ಡಿ.ಗಿರೀಶ್, ಕಾರ್ಯಾಧ್ಯಕ್ಷ ವಿ.ನಿರಂಜನ್, ಸತೀಶ್, ರೋಹನ್, ಸ್ವಾಮಿ, ಪ್ರಿಯದರ್ಶನ್ ಇತರರಿದ್ದರು.