ಹೆಸರು ಕಾಳು ಖರೀದಿ ತೇವಾಂಶ ಮಿತಿಯನ್ನು 12 ರಿಂದ 14ಕ್ಕೆ ಏರಿಸುವಂತೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರಿಗೆ ದೊಡವಾಡ ಪಿಕೆಪಿಎಸ್ ವತಿಯಿಂದ ಮನವಿ ಸಲ್ಲಿಸಿದರು. ನಿಂಗಪ್ಪ ಚೌಡನ್ನವರ, ವಿರೇಂದ್ರ ಸಂಗೊಳ್ಳಿ, ಚನ್ನಯ್ಯ ದಾಬಿಮಠ, ನಾಗಪ್ಪ ಸವದತ್ತಿ, ಇತರರು ಇದ್ದರು. 
ಜಿಲ್ಲೆ

ತೇವಾಂಶ ಮಿತಿ ಹೆಚ್ಚಿಸಿ ಹೆಸರು ಖರೀದಿಸಿ

ಬೈಲಹೊಂಗಲ, ಬೆಳಗಾವಿ: ನಿರಂತರ ಮಳೆ ಹಾಗೂ ವಾತಾವರಣ ಪರಿಣಾಮದಿಂದ ಹೆಸರಿನ ತೇವಾಂಶ ಹೆಚ್ಚಿದ್ದು, ಮಿತಿಯನ್ನು 12ರಿಂದ 14ಕ್ಕೆ ಏರಿಸಿ ಖರೀದಿಸಬೇಕು ಎಂದು ಆಗ್ರಹಿಸಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರಿಗೆ ದೊಡವಾಡ ಗ್ರಾಮದ ಪಿಕೆಪಿಎಸ್ ವತಿಯಿಂದ ಗುರುವಾರ ಕಲ್ಲೊಳ್ಳಿ ಗ್ರಾಮದಲ್ಲಿ ಮನವಿ ಸಲ್ಲಿಸಲಾಯಿತು.
ಪಿಕೆಪಿಎಸ್ ಅಧ್ಯಕ್ಷ ವೀರೇಂದ್ರ ಸಂಗೊಳ್ಳಿ, ಸದಸ್ಯ ನಿಂಗಪ್ಪ ಚೌಡನ್ನವರ ಮಾತನಾಡಿ, ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್‌ಎಕ್ಯೂ ಗುಣಮಟ್ಟದ ಹೆಸರು ಕಾಳು ಖರೀದಿ ಪ್ರಕ್ರಿಯೆ ಆರಂಭಿಸಿದ್ದು, ಪ್ರತಿ ಕ್ವಿಂಟಾಲ್‌ಗೆ 7755 ದರ ನಿಗದಿಪಡಿಸಿ, ತೇವಾಂಶವನ್ನು 12ಕ್ಕೆ ಮಿತಿಗೊಳಿಸಿದೆ. ಆದರೆ, ನಿರಂತರವಾಗಿ ಸುರಿಯುತ್ತಿರುವ ಮಳೆ ಹಾಗೂ ಮೋಡ ಕವಿದ ವಾತಾವರಣದಿಂದಾಗಿ ಹೆಸರು ಕಾಳು ತೇವಾಂಶ 12ಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಇದರಿಂದ ರೈತರು 6 ಸಾವಿರ ರೂ.ಯಂತೆ ಖಾಸಗಿಯವರಿಗೆ ಮಾರುತ್ತಿದ್ದು,

ನಷ್ಟ ಉಂಟಾಗುತ್ತಿದೆ. ಆದ್ದರಿಂದ ಕೂಡಲೇ ತೇವಾಂಶ ಪ್ರಮಾಣವನ್ನು 14ಕ್ಕೆ ಏರಿಸಬೇಕೆಂದು ಒತ್ತಾಯಿಸಿದರು. ಮನವಿ ಸ್ವೀಕರಿಸಿದ ಈರಣ್ಣ ಕಡಾಡಿ, ಕೇಂದ್ರ ಕೃಷಿ ಸಚಿವರಾದ ಕೈಲಾಶ ಚೌಧರಿ ಹಾಗೂ ಶೋಭಾ ಕರಂದ್ಲಾಜೆ ಜತೆ ಮಾತನಾಡಿ ತೇವಾಂಶದ ಮಿತಿ 14 ಕೈ ಏರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಬೇಕೆಂದು ಮನವಿ ಮಾಡುತ್ತೇನೆ ಎಂದರು. ಚನ್ನಯ್ಯ ದಾಬಿಮಠ, ನಾಗಪ್ಪ ಸವದತ್ತಿ, ಈಶ್ವರ ಅಂದಾನಶೆಟ್ಟಿ, ಮುದಕಪ್ಪ ಅಲಕನವರ, ಫಕೀರಪ್ಪ ಗಾಂಧಿ ಇತರರಿದ್ದರು.