ಹಾಸನ : ನಗರದ ಶ್ರೀಚನ್ನಕೇಶವ ದೇವಸ್ಥಾನದ ಬಳಿ ಇರುವ ತೇರಾಪಂಥ್ ಪ್ರೊಫೆಷನಲ್ ಫೋರಂ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಬೃಹತ್ ಉಚಿತ ಆರೋಗ್ಯ ಶಿಬಿರವನ್ನು ಮಾಜಿ ಶಾಸಕ ಪ್ರೀತಂ ಜೆ. ಗೌಡ ಅವರು ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲಾರು ಪ್ರತಿದಿನ ಕೆಲಸದಲ್ಲಿ ಬ್ಯುಸಿ ಆಗುವ ನಾವು ವೈಜ್ಞಾನಿಕ ಜೀವನದಡಿ ಆರೋಗ್ಯದ ಕಡೆ ಹೆಚ್ಚು ಆಸಕ್ತಿ ತೋರಿಸದೇ ಸಮಸ್ಯೆ ಬಂದಾಗ ಮಾತ್ರ ವೈದರ ಬಳಿ ಹೋಗುತ್ತೇವೆ .ಆದರೆ ಉಳಿದ ಸಮಯದಲ್ಲಿ ನಾವು ಯಾವ ಪರೀಕ್ಷಯನ್ನು ಮಾಡಿಸಿಕೊಳ್ಳುವುದಿಲ್ಲ ಎಂದರು.
ತೇರಾಪಂಥ್ ಪ್ರೊಫೆಷನಲ್ ಫೋರಂ ಪ್ರಾರಂಭವಾಗಿ ಮೂರು ವರ್ಷ ಕಳೆದಿದ್ದು, ಮೊದಲ ಬಾರಿಗೆ ಜನರಿಗಾಗಿ ಇಂತಹ ಆರೋಗ್ಯ ಶಿಬಿರ ಹಮ್ಮಿಕೊಂಡಿರುವುದು ಸಂತೋಷ ತಂದಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಶ್ರೀ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ ಮತ್ತು ಕಾಲೇಜು ಪ್ರಾಂಶುಪಾಲ ಪ್ರಸನ್ನ ಎನ್.ರಾವ್ ಅವರು ಮಾತನಾಡಿ, ಜೀವನದಲ್ಲಿ ಕೇವಲ ಹಣ ಸಂಪಾದನೆ ಮಾಡುವುದು ಮುಖ್ಯ ಉದ್ದೇಶವಾಗಿರುತ್ತದೆ. ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸುವುದಿಲ್ಲ ಎಲ್ಲರೂ ಸಮತೋಲನ ಆರೋಗ್ಯವನ್ನ ಕಾಪಾಡಿಕೊಳ್ಳಲು ಪ್ರತಿನಿತ್ಯ ಯೋಗ, ಧ್ಯಾನ ಸೇರಿದಂತೆ ಆಯುರ್ವೇದದ ಕಡೆಗೆ ಹೆಚ್ಚು ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು
ಕಾರ್ಯಕ್ರಮದಲ್ಲಿ ನಗರಸಭೆ ಆಯುಕ್ತ ಸತೀಶ್ ಕುಮಾರ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ನಿರ್ದೇಶಕ ಶಬ್ಬೀರ್ ಅಹಮದ್, ತೇರಾಪಂಥ್ ಪ್ರೊಫೆಷನಲ್ ಫೋರಂ ಅಧ್ಯಕ್ಷ ಭರತ್ ಬನ್ಸಾಲಿ, ಮಲ್ನಾಡ್ ತೇರಾಪಂಥ್ ಸಮಿತಿ ಅಧ್ಯಕ್ಷ ಮಹಾವೀರ್ ಭನ್ಸಾಲಿ, ಉಪಾಧ್ಯಕ್ಷ ಸುರೇಶ್ ಕಾತೇಡ್, ಗೌರವಾಧ್ಯಕ್ಷ ಮಂಗಿಲಾಲ್, ಖಜಾಂಚಿ ಮುಖೇಶ್ ಸುರಾನಾ, ಕೌಶಲ್ಯ, ತಾತೇಡ್ ಇತರರು ಇದ್ದರು.