ಬಾಗಲಕೋಟೆ: ವಿಧಾನಸಭಾ ಸಾರ್ವತ್ರಿಕ ಚುನಾವಣೆ-೨೦೨೩ಕ್ಕೆ ಜಿಲ್ಲೆಯ ತೇರದಾಳ ಮತಕ್ಷೇತ್ರದಲ್ಲಿ ಒಟ್ಟು ೨೨೪೭೧೧ ಮತದಾರರು ಇದ್ದು, ಈ ಪೈಕಿ ಪ್ರಥಮ ಬಾರಿಗೆ ಮತ ಚಲಾಯಿಸುವವರ ಒಟ್ಟು ೪೬೫೭ ಯುವ ಮತದಾರರಿದ್ದಾರೆ.
ತೇರದಾಳ ಮತಕ್ಷೇತ್ರದಲ್ಲಿ ೧೧೨೩೮೨ ಪುರುಷ ಮತ್ತು ೧೧೨೩೧೨ ಮಹಿಳಾ ಮತದಾರರು ಇದ್ದಾರೆ. ಸೇವಾ ಮತದಾರರು ಒಟ್ಟು ೪೨೧ ಇದ್ದು, ಅದರಲ್ಲಿ ೪೧೫ ಪುರುಷ ಮತ್ತು ೬ ಮಹಿಳಾ ಮತದಾರರು ಇದ್ದಾರೆ. ಮತಕ್ಷೇತ್ರದಲ್ಲಿ ೨೩೨ ಮತಗಟ್ಟೆಗಳು ಹಾಗೂ ಒಂದು ಹೆಚ್ಚುವರಿ ಸೇರಿ ಒಟ್ಟು ೨೩೩ ಮತೆಗಟ್ಟೆಗಳಿವೆ. ಚುನಾವಣಾ ಕಾರ್ಯಕ್ಕೆ ಪ್ರತಿ ಮತಗಟ್ಟೆಗೆ ೪ ಮತಗಟ್ಟೆ ಅಽಕಾರಿಗಳನ್ನು ಒಳಗೊಂಡಂತೆ ಒಟ್ಟು ೨೩೨ ಮತಗಟ್ಟೆಗಳಿಗೆ ಹಾಗೂ ಶೇ.೧೦ ರಷ್ಟು ಹೆಚ್ಚುವರಿ ಸಿಬ್ಬಂದಿಗಳು ಸೇರಿ ೧೦೨೧ ಸಿಬ್ಬಂದಿಗಳು ಅವಶ್ಯಕತೆ ಇರುತ್ತದೆ.
ಚುನಾವಣಾ ಮಾದರಿ ನೀತಿ ಸಂಹಿತೆ ಪಾಲನೆಗೆ ಒಟ್ಟು ೧೭ ಸೆಕ್ಟರ ಅಽಕಾರಿಗಳು, ೯ ಪ್ಲಾಯಿಂಗ್ ಸ್ಕಾ÷್ವ್ವಡ್, ೯ ಸ್ಟಾಸಿಕ್ ಸರ್ವಲೆನ್ಸ್ ಟೀಮ್ ಹಾಗೂ ೩ ವಿಡಿಯೋ ಸರ್ವೆಲನ್ಸ್ ಟೀಮ್‌ಗಳನ್ನು ರಚಿಸಲಾಗಿದೆ. ಅನಽಕೃತ ಹಣ ಸಾಗಾಣಿಕೆ, ಸಾಮಗ್ರಿ ಸಾಗಾಣಿಕೆ ಹಾಗೂ ಇತರೆ ಸಾಮಗ್ರಿಗಳನ್ನು ಸಾಗಿಸುತ್ತಿರುವ ಬಗ್ಗೆ ಕಣ್ಗಾವಲು ಇಡುವ ಉದ್ದೇಶದಿಂದ ಬುದ್ನಿ ಪಿ.ಡಿ ಕ್ರಾಸ್, ತೇರದಾಳ ೪ನೇ ಕ್ಯಾನಲ್, ಮಹಾಲಿಂಗಪುರ ಎಪಿಎಂಸಿ ಕ್ರಾಸ್‌ನಲ್ಲಿ ಚೆಕ್‌ಪೋಸ್ಟಗಳನ್ನು ತೆರಯಲಾಗಿದೆ.
ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರಗಳನ್ನು ಎನ್‌ಕೋರ್ ವೆಬ್‌ಸೈಟ್ ಮೂಲಕ ಸಲ್ಲಿಸಬಹುದಾಗಿದೆ. ಸಭೆ, ರ‍್ಯಾಲಿ, ವಾಹನಗಳಿಗೆ ತಾತ್ಕಾಲಿಕ ಪಕ್ಷದ ಕಚೇರಿಗೆ, ಧ್ವನಿವರ್ದಕಗಳಿಗೆ ಹಾಗೂ ಹೆಲಕ್ಟಾಪ್ಟರ ಹಾಗೂ ಹೆಲಿಪ್ಯಾಡ್ ಪರವಾನಿಗೆ ಸುವಿದಾ ವೆಬ್‌ಸೈಟ್‌ನಲ್ಲಿ ಅಭ್ಯರ್ಥಿ ಹಾಗೂ ರಾಜಕೀಯ ಪಕ್ಷದವರು ಪರವಾನಿಗೆ ಕೋರಿ ಅರ್ಜಿ ಸಲ್ಲಿಸಬಹುದಾಗಿದೆ. ತೇರದಾಳ ಮತಕ್ಷೇತ್ರದ ಕಚೇರಿಯಲ್ಲಿ ದೂರು ನಿರ್ವಹಣಾ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ದೂಸಂ.೦೮೩೫೩-೨೩೦೫೫೫ಗೆ ಸಂಪರ್ಕಿಸಿ ಸಾರ್ವಜನಿಕರು ದೂರು ಸಲ್ಲಿಸಬಹುದಾಗಿದೆ.
ಚುನಾವಣಾ ಆಯೋಗವು ಈ ಬಾರಿ ಹಿರಿಯ ನಾಗರಿಕರು, ಅಂಗವಿಕಲರು, ಅಗತ್ಯ ಸೇವೆಗಳ ಮೇಲಿರುವ ಗೈರು ಹಾಜರಿ ಮತದಾರರು, ಕೋವಿಡ್ ಸೋಂಕಿತ ಗೈರು ಮತದಾರಿಗೆ ಅಂಚೆ ಮತಕ್ಕೆ ಅವಕಾಶ ಕಲ್ಪಿಸಲಾಗಿದೆ. ಮತಕ್ಷೇತ್ರದಲ್ಲಿ ೮೦ ರಿಂದ ೮೯ ವರ್ಷದ ೩೪೦೯, ೯೦ ರಿಂದ ೯೯ ವರ್ಷದ ೫೮೩, ೧೦೦ ವರ್ಷ ಮೆಲ್ಪಟ್ಟ ೭೦ ಮತದಾರರಿದ್ದಾರೆ. ಅಂಗವಿಕಲ ೩೭೫೮ ಮತದಾರರಿದ್ದಾರೆ. ಅದರಲ್ಲಿ ೨೧೨೯ ಪುರುಷ, ೧೬೨೮ ಮಹಿಳಾ ಮತ್ತು ಇತರೆಯಲ್ಲಿ ಒಬ್ಬರು ಅಂಗವಿಕಲರಿದ್ದಾರೆ.
ಬಾಕ್ಸ್ . . .
ತೇರದಾಳ ಕ್ಷೇತ್ರದಲ್ಲಿ ೧೫೭ ಲೀಟರ್ ಲಿಕ್ಕರ್ ಜಪ್ತಿ
ತೇರದಾಳ ಮತಕ್ಷೇತ್ರದಲ್ಲಿ ಮಾ.೧೬ ರಿಂದ ಏಪ್ರೀಲ್ ೧ ವರೆಗೆ ಒಟ್ಟು ೬೯೫೯೭ ರೂ.ಗಳ ಮೊತ್ತದ ಒಟ್ಟು ೧೫೭.೬೬ ಲೀಟರ್ ಲಿಕ್ಕರ್‌ನ್ನು ಜಪ್ತ ಮಾಡಿ ವಶಪಡಿಸಿಕೊಳ್ಳಲಾಗಿದೆ.