ಚಿತ್ರದುರ್ಗ: ತೆಲಂಗಾಣ ವಿಧಾನಸಭಾ ಚುನಾವಣೆಗೆ ಬಂದೋಬಸ್ತ್ ನೋಡಲ್ ಅಧಿಕಾರಿ, ಚಿತ್ರದುರ್ಗ ಜಿಲ್ಲಾ ಗೃಹರಕ್ಷಕ ದಳದ ಜಿಲ್ಲಾ ಕಮಾಡೆ ಂಟ್ ಸಿ.ಕೆ ಸಂಧ್ಯಾ ಅವರ ನೇತೃತ್ವದಲ್ಲಿ ಜಿಲ್ಲೆಯ 300 ಗೃಹರಕ್ಷಕ ದಳದ ಸಿಬ್ಬಂದಿ, ಸೋಮವಾರ ತೆಲಂಗಾಣಕ್ಕೆ ತೆರಳಿದರು. ಜಿಲ್ಲಾ ಗೃಹ ರಕ್ಷಕದಳದ ಬೋಧಕ ಎಚ್.ತಿಪ್ಪೇಸ್ವಾಮಿ, ಸಹಾಯಕ ಬೋಧಕ ಶರಣಬಸವರಾಜ್, ನಗರ ಘಟಕದ ಅಧಿಕಾರಿಗಳಾದ ಸಿ.ಎನ್.ಕಾಂತರಾ ಜ್, ವಿ.ಎಚ್.ತಿಪ್ಪೇಸ್ವಾಮಿ, ವಿ.ಪ್ರಹ್ಲಾದ್ ಹಾಗೂ ಹೊಳಲ್ಕೆರೆ, ಹೊಸದುರ್ಗ, ಹಿರಿಯೂರು, ಚಳ್ಳಕೆರೆ ಮತ್ತು ಮೊಳಕಾಲ್ಮೂರು ಗೃಹ ರಕ್ಷಕ ಘಟಕ ಅಧಿಕಾರಿಗಳಾದ ಎನ್.ಮಂಜುನಾಥ್, ನಾಗರಾಜ್, ಹನುಮಂತರಾಯಪ್ಪ, ಜಗನ್ನಾಥ್, ಓಬಯ್ಯ ಹಾಗೂ ರಾಜೇಂದ್ರ ಇತರರು ಇದ್ದರು.