ಜಿಲ್ಲೆ

ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಇರಲಿ ನಿಗಾ

ಚಿತ್ರದುರ್ಗ: ಗ್ರಾಪಂಗಳಲ್ಲಿ ತೆರಿಗೆ ವಸೂಲಿ ಕುಂಠಿತವಾಗಿದ್ದು, ನಿಗದಿತ ಕಾಲಾವಧಿಯೊಳಗೆ ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಗಮನ ಹರಿಸಬೇಕು ಎಂದು ಜಿಪಂ ಸಿಇಒ ಎಸ್.ಜೆ. ಸೋಮಶೇಖರ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಪಂ ಕಚಕೇರಿಯಲ್ಲಿ ಮಂಗಳವಾರ ನರೇಗಾ, ಸ್ವಚ್ಛ ಭಾರತ್ ಮಿಷನ್, ಸಾಮಾಜಿಕ ಲೆಕ್ಕ ಪರಿಶೋಧನೆ ಹಾಗೂ ಪಂಚಾಯತ್ ರಾಜ್ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಸಿಎಒ ಅವರು ಗ್ರಾಪಂಗಳಿಗೆ ಭೇಟಿ ನೀಡಿ ವಿಶೇಷ ಆಡಿಟ್ ನಡೆಸಬೇಕು. ನಿಯಮಿತವಾಗಿ ಗ್ರಾಮ ಸಭೆಗಳಾಗಬೇಕು. ಅರ್ಹ ಫಲಾ ನುಭವಿಗಳಿಗೆ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ವೈಯಕ್ತಿಕ ಶೌಚಗೃಹಗಳ ನಿರ್ಮಾಣಕ್ಕೆ ಕಾರ್ಯಾದೇಶ ನೀಡಿ ಹಣಪಾವತಿಸಬೇಕು ಎಂದು ತಿಳಿಸಿದರು.

ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಕೈಗೊಂಡಿರುವ ಘನತ್ಯಾಜ್ಯ ನಿರ್ವಹಣಾ ಘಟಕಗಳು, ಬೂದು ನೀರು ಹಾಗೂ ಮಲ ತ್ಯಾಜ್ಯ ಸಂಸ್ಕರಣ ಘಟಕಗಳ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸುವಂತೆ ತಾಕೀತು ಮಾಡಿದರು.

ಕ್ರಿಯಾ ಯೋಜನೆ 2025-26ನ್ನು ಸಿದ್ಧಪಡಿಸಲು ಆಗಿರುವ ಗ್ರಾಮ ಸಭೆಗಳ ನಡಾವಳಿ, ಪೋಟೊಗಳನ್ನು ಲಾಗಿನ್‌ನಲ್ಲಿ ಅಫ್‌ಲೋಡ್ ಮಾಡಬೇಕು ಎಂದು ತಿಳಿಸಿದರು.

ಉಪ ಕಾರ್ಯದರ್ಶಿ ಕೆ. ತಿಮ್ಮಪ್ಪ, ಮುಖ್ಯ ಯೋಜನಾಧಿಕಾರಿ ಸಿ.ಎನ್. ಗಾಯತ್ರಿ, ಸಿಎಒ ಮಧು, ತಾಪಂ ಇಒಗಳಾದ ಹನುಮಂತಪ್ಪ, ಸತೀಶ್, ಸುನೀಲ್, ವಿಶ್ವನಾಥ್, ರವಿಕುಮಾರ್, ಜಿಲ್ಲಾ ಯೋಜನಾ ವ್ಯವಸ್ಥಾಪಕ ಸೈಯದಾಫಿಜಾ, ಸಂತೋಷ್‌ಕುಮಾರ್, ಮೋಹನ್, ಎಚ್.ಶಶಿಧರ್, ಯಶವಂತ್, ರತ್ನಮಾಲಾ, ರೂಪಕುಮಾರಿ, ಶಿವಮೂರ್ತಿ, ಮಹೇಶ್, ಬಿ.ಸಿ.ನಾಗರಾಜ್, ಎಚ್.ಆರ್. ಶಶಿಧರ್ ಇತರರಿದ್ದರು.