ಜಿಎಸ್ಟಿ ಅನುಷ್ಠಾನಗೊಂಡು 5 ವರ್ಷ ಹಿನ್ನಲೆಯಲ್ಲಿ ಬೆಳಗಾವಿ ನಗರದ ಕೆಎಲ್‌ಇ ಸಂಸ್ಥೆಯ ಶತಮಾನೋತ್ಸವ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಮೇಜರ್ ಪರಮದೀಪ ಸಿಂಗ್ ಬಾಜ್ವಾ ಉದ್ಘಾಟಿಸಿದರು. ವಿನೀತ ಅಗರ್ವಾಲ್, ಆಯುಕ್ತ ಬಸವರಾಜ ನಳೆಗಾವೆ, ಡಾ.ಎ.ಸಾವಜಿ ಇತರರಿದ್ದರು. 
ಜಿಲ್ಲೆ

ತೆರಿಗೆ ಪಾವತಿಸಿ ಅಭಿವೃದ್ಧಿಗೆ ಕೈ ಜೋಡಿಸಿ

ಬೆಳಗಾವಿ: ಬೃಹತ್, ಸಣ್ಣ ಗಾತ್ರದ ಉದ್ದಿಮೆಗಳು ಸಕಾಲಕ್ಕೆ ತೆರಿಗೆ ಪಾವತಿಸಿ ದೇಶದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ವಿಂಗ್ ಕಮಾಂಡರ್ ಮೇಜರ್ ಪರಮದೀಪ ಸಿಂಗ್ ಬಾಜ್ವಾ ಹೇಳಿದ್ದಾರೆ.

ಜಿಎಸ್‌ಟಿ ಅನುಷ್ಠಾನಗೊಂಡು 5 ವರ್ಷ ಕಳೆದ ಅಂಗವಾಗಿ ನಗರದ ಕೆಎಲ್‌ಇ ಸಂಸ್ಥೆಯ ಶತಮಾನೋತ್ಸವ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಜಿಡಿಪಿ ಮೌಲ್ಯ ಹೆಚ್ಚಿಸಲು ಹಾಗೂ ಆರ್ಥಿಕ ಅಭಿವೃದ್ಧಿಗೆ ಜಿಎಸ್‌ಟಿ ಪೂರಕವಾಗಿದೆ. ದೇಶದಲ್ಲಿ ತೆರಿಗೆ ಪಾವತಿ ವಿಧಾನ ಸದ್ಯ ಸರಳವಾಗಿದೆ ಎಂದರು.

ಬೆಳಗಾವಿ ವಿಭಾಗದಲ್ಲಿ ಕಳೆದ ವರ್ಷ 7,124 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು. 2021-2022ನೇ ಸಾಲಿನಲ್ಲಿ 10,172 ರೂ. ಜಿಎಸ್‌ಟಿ ಸಂಗ್ರಹವಾಗಿದೆ. ಆರಂಭಿಕ ಹಂತದಲ್ಲಿ ಜಿಎಸ್ಟಿ ಪಾವತಿ ವಿಧಾನ ಕಷ್ಟಕರವಾಗಿತ್ತು. ಸದ್ಯ ಈ ಸಮಸ್ಯೆ ನಿವಾರಣೆಯಾಗಿದೆ ಎಂದರು.

ಜೆಎಸ್‌ಡಬ್ಲು ಕಂಪನಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಗ್ರೂಪ್ ಮುಖ್ಯಸ್ಥ ವಿನೀತ ಅಗರ್ವಾಲ್ ಮಾತನಾಡಿದರು. ಕೇಂದ್ರ ತೆರಿಗೆ ಆಯುಕ್ತ ಬಸವರಾಜ ನಳೆಗಾವೆ, ಕೆಎಲ್‌ಇ ವಿಶ್ವವಿದ್ಯಾಲಯದ ಕುಲಪತಿ ಡಾ.ಎ.ಸಾವಜಿ, ಸರಕು ಮತ್ತು ಸೇವಾ ತೆರಿಗೆ ಇಲಾಖೆ ಅಧಿಕಾರಿ, ವಿವಿಧ ಕಂಪನಿಯ ಮಾಲೀಕರು, ಉದ್ಯಮಿಗಳು ಉಪಸ್ಥಿತರಿದ್ದರು.