ಜಿಲ್ಲೆ

ತೆಂಗು ಬೆಳೆ ವಿಚಾರ ಸಂಕಿರಣ

reportermys


ಚಾಮರಾಜನಗರ: ತಾಲೂಕಿನ ಹರದನಹಳ್ಳಿ ಬಳಿ ಇರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ(ಕೆವಿಕೆ) ತೆಂಗು ಬೆಳೆ ವಿಚಾರ ಸಂಕಿರಣ ಏರ್ಪಡಿಸಲಾಗಿತ್ತು.


ತೆಂಗು ಅಭಿವೃದ್ಧಿ ಮಂಡಳಿ ಸಹಯೊಗದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಮಂಡಳಿಯ ನಿರ್ದೇಶಕ ಇ.ಅರವಾಳಿ ಉದ್ಘಾಟಿಸಿ ಮಂಡಳಿ ವತಿಯಿಂದ ರೈತರಿಗೆ ಲಭ್ಯವಿರುವ ಸೇವಾ ಸೌಲಭ್ಯಗಳನ್ನು ವಿವರಿಸಿದರು.
ಕೃಷಿ ಮಹಾವಿದ್ಯಾಲಯದ ವಿಶೇಷಾಧಿಕಾರಿ ಡಾ.ಸಿ. ದೊರೆಸ್ವಾಮಿ ಮಾತನಾಡಿ, ತೆಂಗಿನಲ್ಲಿ ಮೌಲ್ಯವರ್ಧನೆಯ ಮಹತ್ವದ ಬಗ್ಗೆ ತಿಳಿಸಿಕೊಟ್ಟರು. ಕೆವಿಕೆ ವಿಜ್ಞಾನಿ(ತೋಟಗಾರಿಕೆ) ಡಾ. ಎ.ಬಿ.ಮೋಹನ್‌ಕುಮಾರ್ ತೆಂಗು ಬೆಳೆಯ ಪ್ರಾಮುಖ್ಯತೆ ಹಾಗೂ ತರಬೇತಿ ಪಡೆದುಕೊಂಡ ನಂತರ ಅನುಸರಿಸಬೇಕಾದ ವಿಧಾನಗಳ ಬಗ್ಗೆ ಅರಿವು ಮೂಡಿಸಿದರು.

ವಿಚಾರ ಸಂಕಿರಣದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ 50 ರೈತರು ಆಗಮಿಸಿದ್ದರು. ಮೈಸೂರು ತೋಟಗಾರಿಕಾ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಸಿದ್ದಪ್ಪ, ಕೆವಿಕೆ ವಿಜ್ಞಾನಿ(ಕೃಷಿ ವಿಸ್ತರಣೆ) ಎನ್.ಎಸ್.ಸುಪ್ರಿಯಾ, ಕೃಷಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ಉಮಾಶಂಕರ್ ಇದ್ದರು.