ಕಿಕ್ಕೇರಿ ಹೋಬಳಿಯ ಮಾದಾಪುರಕೊಪ್ಪಲು ಗ್ರಾಮದಲ್ಲಿ ಮಂಗಳವಾರ ತೆಂಗಿನ ತೋಟಕ್ಕೆ ತಗುಲಿದ್ದ ಆಕಸ್ಮಿಕ ಬೆಂಕಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ನಂದಿಸಿದರು. 
ಜಿಲ್ಲೆ

ತೆಂಗಿನ ತೋಟಕ್ಕೆ ಬೆಂಕಿ ಬಿದ್ದು ಅಪಾರ ನಷ್ಟ

ಕಿಕ್ಕೇರಿ: ಹೋಬಳಿಯ ಗಡಿಯಂಚಿನ ಮಾದಾಪುರಕೊಪ್ಪಲು ಗ್ರಾಮದ ಹೊರವಲಯದಲ್ಲಿರುವ ಕಿರು ಅರಣ್ಯ, ತೆಂಗಿನ ತೋಟಕ್ಕೆ ಮಂಗಳವಾರ ಬೆಂಕಿ ತಗುಲಿ ಅಪಾರ ನಷ್ಟವಾಗಿದೆ.

ಗ್ರಾಮದ ವಿನೋದಮ್ಮ ರಾಮಕೃಷ್ಣೇಗೌಡ ಎಂಬುವರ ತೋಟದಲ್ಲಿ ಅವಘಡ ಸಂಭವಿಸಿದೆ. ಕಿರು ಅರಣ್ಯದಲ್ಲಿ ಒಣಗಿದ್ದ ಕುರುಚಲು ಗಿಡಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಪಕ್ಕದಲ್ಲಿಯೇ ಇದ್ದ 2 ಎಕರೆ ತೆಂಗಿನ ತೋಟಕ್ಕೆ ಆವರಿಸಿಕೊಂಡಿತು. ಪರಿಣಾಮ ತೋಟದಲ್ಲಿದ್ದ ದೊಡ್ಡ ತೆಂಗಿನ ಮರಗಳು, ನೂರಾರು ತೆಂಗಿನ ಸಸಿಗಳಿಗೆ ಬೆಂಕಿ ತಗುಲಿದೆ. 10 ಗುಂಟೆ ಕಬ್ಬು ಸುಟ್ಟು ಹೋಗಿದೆ.

ತೋಟದಲ್ಲಿ ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವುದನ್ನು ಕಂಡ ಅಕ್ಕಪಕ್ಕದ ಜಮೀನಿನ ರೈತರು ಬೆಂಕಿ ನಂದಿಸಲು ಯತ್ನಿಸಿದರು. ಆದರೆ ಬಿಸಿಲಿನ ಝಳಕ್ಕೆ ಬೆಂಕಿ ಕೆನ್ನಾಲಿಗೆ ಎಲ್ಲೆಡೆ ಆವರಿಸಿತು. ವಿಷಯ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿ ಅಪಾರ ಪ್ರಮಾಣದಲ್ಲಿ ಆಗುವ ನಷ್ಟವನ್ನು ತಪ್ಪಿಸಿದರು.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ವಣ್ಣ, ಚಂದ್ರಶೇಖರ್, ಸೋಮಶೇಖರಗೌಡ, ಸಚಿನ್ ಕರದನ್, ಭಜಂತ್ರಿ ಕಿರಣಕುಮಾರ್, ಯಮನಪ್ಪ ಕೊಪ್ಪಳ ಇದ್ದರು.