ಕರ್ನಾಟಕ ಜಾನಪದ ಪರಿಷತ್ ಕಳಸ ಘಟಕ ಏರ್ಪಡಿಸಿದ್ದ ಬೇಸಿಗೆ ಶಿಬಿರದಲ್ಲಿ ಕರಟದ ಚಿಪ್ಪಿನ ಕಲೆ ಕುರಿತು ಮಕ್ಕಳಿಗೆ ಮಾಹಿತಿ ನೀಡಲಾಯಿತು. ನಿಕಿತಾ, ನಾಗಮಣಿ, ಪ್ರಿಯಾ, ಗಿರಿಜಾ ಇತರರಿದ್ದರು. 
ಜಿಲ್ಲೆ

ತೆಂಗಿನ ಚಿಪ್ಪಿನ ಕಲೆ ತರಬೇತಿ

ಕಳಸ: ಕರ್ನಾಟಕ ಜಾನಪದ ಪರಿಷತ್ ಕಳಸ ಘಟಕದ ನೇತೃತ್ವದಲ್ಲಿ ಕುದುರೆಮುಖದ ವಿನೋಬನಗರದಲ್ಲಿ ಮಲ್ನಾಡ್ ಎಮಿಗೋಸ್ ನಡೆಸುತ್ತಿರುವ 15 ದಿನಗಳ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಕರಟದ ಚಿಪ್ಪಿನ ಕಲೆ ತಿಳಿಸಿಕೊಡಲಾಯಿತು.

ತೆಂಗಿನಕಾಯಿ ಕರಟದ ಚಿಪ್ಪಿನ ಕಲೆಯನ್ನು ಪ್ರಾಯೋಗಿಕವಾಗಿ ಪೂರ್ಣಚಂದ್ರ ಮಾಹಿತಿ ನೀಡಿದರು. ಮಲೆನಾಡಿನ ಅಳಿದುಹೋಗುವ ಕಲೆಯನ್ನು ಯುವ ಜನತೆಯಿಂದ ಉಳಿಸಲು ಸಾಧ್ಯ. ನಮ್ಮ ನೆಲದ ಕಲೆಯನ್ನು ಗೌರವಿಸುವುದು ನಮ್ಮ ಆದ್ಯ ಕರ್ತವ್ಯ. ಮಲೆನಾಡಿನ ಎಲೆಮರೆಯ ಕಲೆಯನ್ನು ಜಾನಪದ ಪರಿಷತ್ ಗಮನಕ್ಕೆ ತಂದಲ್ಲಿ ಅಂತಹ ಪ್ರತಿಭೆಗಳನ್ನು ಮುಖ್ಯ ವೇದಿಕೆಗೆ ಪರಿಚಯಿಸುವ ಕೆಲಸ ಕರ್ನಾಟಕ ಜಾನಪದ ಪರಿಷತ್ ಮಾಡಲಿದೆ ಎಂದು ರಜಿತ್ ಕೆಳಗೂರ್ ಅಭಿಪ್ರಾಯಪಟ್ಟರು. ಶಿಬಿರದ ಮುಖ್ಯಸ್ಥ ವಿಕ್ಕಿ, ಕಜಾಪ ಸದಸ್ಯರಾದ ನಿಕಿತಾ ಸಂತೋಷ್ ಜೈನ್, ನಾಗಮಣಿ, ಪ್ರಿಯಾ ಗುರುಪ್ರಸಾದ್, ಗಿರಿಜಾ ಇತರರಿದ್ದರು.