ಜಿಲ್ಲೆ

ತೆಂಗಿಗೆ ಕಪ್ಪು ತಲೆ ಹುಳು ಬಾಧೆ ಹತೋಟಿಗೆ ಕ್ರಮ ವಹಿಸಿ

ಚಿತ್ರದುರ್ಗ: ಜಿಲ್ಲೆಯಲ್ಲಿ ತೆಂಗಿನ ತೋಟಗಳಿಗೆ ತಗುಲಿರುವ ಕಪ್ಪು ತಲೆ ಹುಳು ಬಾಧೆ ಸಮಗ್ರ ಹತೋಟಿಗೆ ಅಗತ್ಯ ಕ್ರಮವಹಿಸ ಬೇಕು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎನ್.ಆರ್.ಮಹೇಶ್ವರಪ್ಪ ಸೂಚಿಸಿದರು. ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಶುಕ್ರವಾರ ಜರುಗಿದ ಜಿಲ್ಲಾ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಪ್ಪುತಲೆ ಹುಳು ಬಾಧೆಯಿಂದ ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ರೋಗ ನಿಯಂತ್ರಣ ನಿಟ್ಟಿನಲ್ಲಿ ಔಷಧ ಸಿಂಪಡಣೆ ಸೇರಿ ದಂ ತೆ ರೈತರಲ್ಲಿ ಜಾಗೃತಿ ಮೂಡಿಸಬೇಕು. ಚಿತ್ರದುರ್ಗ,ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲೂಕುಗ ಳನ್ನೂ ತೆಂಗು ಕ್ಲಸ್ಟರ್ ವ್ಯಾಪ್ತಿಗೆ ಸೇರಿಸ ಬೇಕು. ಕಪ್ಪು ತಲೆ ಹುಳದ ಬಾಧೆಯಿಂದ ಹಾಳಾದ ತೋಟಗಳ ನಿರ್ವಹಣೆ ಹಾಗೂ ರೋಗಹ ತೋಟಿಗೆ ಸಹಾಯಧನವನ್ನು ಜಿಲ್ಲೆಯ ಎಲ್ಲ ತೆಂಗು ಬೆಳೆಗಾರರಿಗೂ ಒದಗಿಸ ಬೇಕೆಂದರು.

ತೋಟಗಾರಿಕೆ ಉಪನಿರ್ದೇಶಕಿ ಜಿ.ಸವಿತಾ ಮಾತನಾಡಿ,ಬೇಸಿಗೆಯಲ್ಲಿ ತೆಂಗಿನ ಮರಗಳಿಗೆ ಕಪ್ಪುತಲೆ ಹುಳು ಬಾಧೆ ಹೆಚ್ಚಳವಾಗಲಿದೆ. ರೋಗ ನಿಯಂತ್ರಣಕ್ಕೆ ತೆಂಗು ಅಭಿವೃದ್ಧಿ ಮಂಡಳಿಯಿಂದ ಔಷಧ ಸಂಪರಣೆ ಸೇರಿದಂತೆ ಅಗತ್ಯ ಕ್ರಮವಹಿಸಲಾಗಿದೆ ಎಂದರು.

ಜಿಲ್ಲಾ ಕೃಷಿಕ ಸಮಾಜದ ಖಜಾಂಚಿ ಭಕ್ತ ಪ್ರಹ್ಲಾದ್ ಮಾತನಾಡಿ,ಮೈಕ್ರೋ ಪೈನಾನ್ಸ್ ಸಂಸ್ಥೆಗಳ ಕಿರುಕುಳ ತಪ್ಪಿಸಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ(ಪಿಎಲ್‌ಡಿ ಬ್ಯಾಂಕ್)ಮೂಲಕ ಜಿಲ್ಲೆಯ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಹೊಸದಾಗಿ ಸಾಲ ಕೊಡ ಬೇಕೆಂ ದರು.

ಇದಕ್ಕೆ ಪ್ರತಿಕ್ರಿಯಿಸಿದ ಮಹೇಶ್ವರಪ್ಪ ಅವರು,ಸಭೆ ನಡವಳಿಯೊಂದಿಗೆ ಪಿಎಲ್‌ಡಿ ಬ್ಯಾಂಕ್‌ಗಳ ಮೂಲಕ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಸಾಲ ಸೌಲಭ್ಯ ಕಲ್ಪಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವಂತೆ ಜಂಟಿ ಕೃಷಿ ನಿರ್ದೇಶಕರಿಗೆ ಸೂಚಿಸಿದರು.

ಪಿಎಲ್‌ಡಿ ಬ್ಯಾಂಕ್,ವ್ಯವಸಾಯೋತ್ಪನ್ನ ಸಹಕಾರ ಸಂಘಗಳು,ಕೃಷಿ ಪತ್ತಿನ ಸಹಕಾರ ಸಂಘಗಳು ಸೇರಿದಂತೆ ಇತ್ಯಾದಿ ಸಹಕಾರ ಸಂಘ ಗಳಿಂದ ರೈತರಿಗೆ ಆಗುತ್ತಿರುವ ಅನುಕೂಲ ಮಾಹಿತಿಯನ್ನು ಒಂದು ವಾರದೊಳಗೆ ಕೊಡಲಾಗುವುದು ಎಂದು ಎಆರ್‌ಸಿಎಸ್ ಬಾಹು ಬಲಿ ತಿಳಿಸಿದರು.

ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್,ಸಮಾಜದ ಉಪಾಧ್ಯಕ್ಷ ಧರಣೇಶ್,ರಾಜ್ಯಪ್ರತಿನಿಧಿ ವಿ.ಜಿ.ಪರಮೇಶ್ವರಪ್ಪ, ಖ ಜಾಂಚಿ ಭಕ್ತ ಪ್ರಹ್ಲಾದ್, ಪ್ರಧಾನ ಕಾರ‌್ಯದರ್ಶಿ ರಾಗಿಶಿವಮೂರ್ತಪ್ಪ, ತಾಲೂಕು ಕೃಷಿ ಸಮಾಜದ ಅಧ್ಯಕ್ಷ ಬಿ.ಟಿ.ಜಗದೀಶ್,ಸಿ.ಎಚ್.ಕಾಂ ತರಾಜ್,ಹಿರಿಯೂರು ತಾಲೂಕು ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ಕೆ.ಜಗದೀಶ್ ಕಂದಿಕೆರೆ,ಕೃಷಿ ಸಮಾಜದ ಜಿಲ್ಲಾ ಪ್ರತಿನಿಧಿ ಶಶಿಧರ್, ರಮೇಶಪ್ಪ ಜಿಲ್ಲಾ ಕೃಷಿಕ ಸಮಾಜದ ಕಾರ‌್ಯಕಾರಿ ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳಿದ್ದರು.