ಜಿಲ್ಲೆ

ತುಳಿತಕ್ಕೆ ಒಳಗಾದರೂ ಅಭಿವೃದ್ಧಿ ಪರ ನಿಂತ ಒಕ್ಕಲಿಗರು : ಮಾಜಿ ಸಿಎಂ ಎಚ್​ಡಿಕೆ ಅಭಿಮತ, ರಾಮನಗರದಲ್ಲಿ ಕೆಂಪೇಗೌಡರ 513ನೇ ಜಯಂತ್ಯುತ್ಸವ

Ramanagara

ರಾಮನಗರ: ಅತ್ಯಂತ ತುಳಿತಕ್ಕೆ ಒಳಗಾದರೂ ರಾಜ್ಯದ ಸಮಗ್ರ ಅಭಿವೃದ್ಧಿಗೆ ಬೆನ್ನೆಲುಬಾಗಿ ನಿಂತಿರುವ ಏಕೈಕ ಸಮಾಜ ಎಂದರೆ ಒಕ್ಕಲಿಗ ಸಮಾಜ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ನಗರದ ಹಳೇ ಬಸ್​ ನಿಲ್ದಾಣದ ಬಳಿ ಸೋಮವಾರ ಕೆಂಪೇಗೌಡ ಜಯಂತ್ಯುತ್ಸವ ಸಮಿತಿ, ತಾಲೂಕು ಒಕ್ಕಲಿಗರ ಸಂ ಜಂಟಿಯಾಗಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ 513ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಭಿವೃದ್ಧಿಗಾಗಿ ಒಕ್ಕಲಿಗ ಸಮುದಾಯ ಲಾಂತರ ಎಕರೆ ಜಮೀನು ಕಳೆದುಕೊಂಡಿದೆ. ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗೂ ಕೊಡುಗೆ ನೀಡಿರುವುದು ಒಕ್ಕಲಿಗ ಸಮುದಾಯವೇ ಎಂದು ಬಣ್ಣಿಸಿದರು.

ಅಂದು ಕೆಂಪೇಗೌಡ ದೂರದಶಿರ್ತ್ವದ ಪರಿಣಾಮವಾಗಿ ಇಂದು ಬೆಂಗಳೂರು ವಿಶ್ವ ಭೂಪಟದಲ್ಲಿ ಸ್ಥಾನ ಪಡೆದುಕೊಂಡಿದೆ ಎಂದರೆ ಅದಕ್ಕೆ 500 ವರ್ಷಗಳ ಹಿಂದೆ ಕೆಂಪೇಗೌಡರು ಹಾಕಿದ ಭದ್ರ ಬುನಾದಿಯೇ ಕಾರಣ. ಕನ್ನಡಿಗರು ಮಾತ್ರವಲ್ಲದೆ, ದೇಶದ ನಾನಾ ಮೂಲಗಳಿಂದ ಬಂದ ಲಾಂತರ ಕುಟುಂಬಗಳನ್ನು ಇಂದು ತನ್ನ ಒಡಲಲ್ಲಿ ಇಟ್ಟುಕೊಂಡು ಪೊರೆಯುತ್ತಿದೆ ಎಂದರು.

9 ಸಾವಿರ ಸರ್ಕಾರಿ ಆಸ್ತಿ ಲೂಟಿ: ಅಂದು ತಾಂತ್ರಿಕ ನೈಪುಣ್ಯತೆ ಇಲ್ಲದಿದ್ದರೂ ಕೋಟೆ ಕೊತ್ತಲಗಳು, ಹಲವಾರು ಕೆರೆ&ಕಟ್ಟೆಗಳನ್ನು ಕೆಂಪೇಗೌಡರು ಕಟ್ಟಿಸಿದ್ದರು. ಆದರೆ ಇಂದು ಭೂಗಳ್ಳರು ಈ ಕೆರೆಗಳನ್ನು ನುಂಗಿ ಹಾಕಿ ಕೆಂಪೇಗೌಡರ ಶ್ರಮಕ್ಕೆ ಕೊಡಲಿ ಪೆಟ್ಟು ನೀಡಿದ್ದಾರೆ. ಈಗ ಧರ್ಮಾಂಬುದಿ, ಕೆಂಪಾಂಬುದಿ ಕೆರೆಗಳು ಏನಾಗಿವೆ ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ಎಚ್ಡಿಕೆ ಹೇಳಿದರು. ನಮ್ಮ ಮೊದಲ ಮೈತ್ರಿ ಸರ್ಕಾರದ ಅವಧಿಯಲ್ಲಿ ಎ.ಟಿ.ರಾಮಸ್ವಾಮಿ ನೇತೃತ್ವದ ಸಮಿತಿಯನ್ನು ರಚನೆ ಮಾಡಲಾಗಿತ್ತು. ಈ ಸಮಿತಿ ನೀಡಿದ ವರದಿ ಪ್ರಕಾರ ಸುಮಾರು 9 ಸಾವಿರ ಸರ್ಕಾರಿ ಆಸ್ತಿಗಳು ಲೂಟಿ ಆಗಿವೆ. ಇಂದು ನಾವೆಲ್ಲರೂ ಕೆಂಪೇಗೌಡರ ಆಶಯಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕಿದೆ ಎಂದು ಎಚ್​ಡಿಕೆ ಹೇಳಿದರು.

ಸಾಧಕರು ಸಾರ್ವಕಾಲಿಕ: ವಿಧಾನಪರಿಷತ್​ ಸದಸ್ಯ ಎಸ್​. ರವಿ ಮಾತನಾಡಿ, ಯಾರು ಮಹತ್ತರವಾದ ಸಾಧನೆ ಮಾಡುತ್ತಾರೋ ಅವರು ಶತಮಾನಗಳು ಕಳೆದರೂ ನೆನಪಿನಲ್ಲಿ ಉಳಿಯುತ್ತಾರೆ. ಅಂತಹ ಮಹನೀಯರ ಸಾಲಿನಲ್ಲಿ ಕೆಂಪೇಗೌಡರು ನಿಲ್ಲುತ್ತಾರೆ. ಸಮ ಸಮಾಜದ ನಿರ್ಮಾಣದ ಕನಸು ಕಂಡು ಸಾಕಾರಗೊಳಿಸಿದವರು ಕೆಂಪೇಗೌಡರು. ಅವರ ದೂರದೃಷ್ಟಿತ್ವದ ಲವಾಗಿ ಇಂದು ಬೆಂಗಳೂರು ಬೆಳೆದಿದೆ ಎಂದು ಬಣ್ಣಿಸಿದರು.

ನಾಡಪ್ರಭುವಿನ ಆದರ್ಶ ಮಾದರಿ: ಶಾಸಕ ಎ. ಮಂಜುನಾಥ್​ ಮಾತನಾಡಿ, ಕೆಂಪೇಗೌಡರು ಕಟ್ಟಿದ ಬೆಂಗಳೂರು ಒಕ್ಕಲಿಗರಿಗೆ ಮಾತ್ರ ಸೀಮಿತವಾಗಿಲ್ಲ. ತನ್ನ ಒಡಲಲ್ಲಿ ಎಲ್ಲರನ್ನೂ ಸೇರಿಸಿಕೊಂಡು ಹೃದಯ ಶ್ರೀಮಂತಿಕೆ ಮೆರೆಯುತ್ತಿದೆ. ಇಂದು ನಾವೆಲ್ಲರೂ ರಾಜಕಾರಣದಲ್ಲಿ ಕೆಂಪೇಗೌಡರ ಆದರ್ಶನವನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದರು. ಕೆಂಪೇಗೌಡರು ಹುಟ್ಟಿದ ನಾಡು ಮಾಗಡಿಯಲ್ಲಿ ಕೌಶಲ ಅಭಿವೃದ್ಧಿಗೆ ಪೂರಕವಾಗಿ ಒಂದು ವಿಶ್ವವಿದ್ಯಾಲಯ ಸ್ಥಾಪನೆ ಸಂಬಂಧ ಎಚ್​.ಡಿ. ಕುಮಾರಸ್ವಾಮಿ ಅವರು ಬಜೆಟ್​ನಲ್ಲಿ ಮಂಡಿಸಿದ್ದರು. ಆದರೆ ನಂತರದ ಸರ್ಕಾರಗಳು ಇದನ್ನು ಜಾರಿಗೆ ತಂದಿಲ್ಲ. ಈ ಬಗ್ಗೆ ಹಾಲಿ ಮುಖ್ಯಮಂತ್ರಿಗೂ ಮನವಿ ಸಲ್ಲಿಸಿದ್ದೇನೆ ಎಂದರು. ಅಲ್ಲದೆ, ಕೆಂಪೇಗೌಡರು ಕಟ್ಟಿದ ಕೋಟೆಗಳು ಹಾಗೂ ಕೆರೆಗಳನ್ನು ಉಳಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಪ್ರ್ರಾಮಾಣಿಕ ಕೆಲಸ ಮಾಡಬೇಕಿದೆ ಎಂದರು.

ಶಾಸಕಿ ಅನಿತಾ ಕುಮಾರಸ್ವಾಮಿ, ಮಾಜಿ ಶಾಸಕ ಕೆ.ರಾಜು, ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ ಮಾತನಾಡಿದರು.

ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಒಕ್ಕಲಿಗ ಸಮುದಾಯದ ಪ್ರತಿಭಾನ್ವಿತ ವಿದ್ಯಾಥಿರ್ಗಳು ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.

ಕೆಂಪೇಗೌಡ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಕೆ.ಚಂದ್ರಯ್ಯ, ಒಕ್ಕಲಿಗರ ಸಂದ ಅಧ್ಯಕ್ಷ ಹನುಮೇಲಿಂಗು, ಬಿಡಿಸಿಸಿ ಬ್ಯಾಂಕ್​ ನಿರ್ದೇಶಕ ಎರೇಹಳ್ಳಿ ಮಂಜು, ನಗರಸಭೆ ಅಧ್ಯೆ ಬಿ.ಸಿ.ಪಾರ್ವತಮ್ಮ, ಸರ್ಕಾರಿ ನೌಕರರ ಸಂದ ಜಿಲ್ಲಾಧ್ಯಕ್ಷ ಕೆ.ಸತೀಶ್​, ಪ್ರಾಧಿಕಾರದ ಅಧ್ಯಕ್ಷ ಶಿವಮಾದು, ವರದರಾಜಗೌಡ ಮುಂತಾದವರು ಇದ್ದರು. ಸಹಾಯಕ ಪ್ರಾಧ್ಯಾಪಕ ಡಾ.ರವೀಂದ್ರ, ಉಪನ್ಯಾಸ ನೀಡಿದರೆ, ಶಿಕ್ಷಕ ಶಿವಸ್ವಾಮಿ ನಿರೂಪಿಸಿದರು.

ಕಾರ್ಯಕ್ರಮಕ್ಕೂ ಮುನ್ನ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಮೆರವಣಿಗೆ ಮಾಡಲಾಯಿತು. ಮೆರವಣಿಗೆಗೆ ಸಾಂಸತಿಕ ಕಲಾ ತಂಡಗಳು ಮೆರುಗು ನೀಡಿದವು.