ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ
ಉಪನಯನ ಮತ್ತು ವಿವಾಹ ಸಮಾರಂಭ ನಿಮಿತ್ತ ಶ್ರೀ ಸಹಸ್ರಾರ್ಜುನ ಮಂಗಲ ಕಾರ್ಯ ಸಮಿತಿ ವತಿಯಿಂದ ನಗರದ ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ ಶುಕ್ರವಾರ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ಜರುಗಿದವು.
ಶ್ರೀ ತುಳಜಾಭವಾನಿ ಮಾತೆಗೆ ಪೂಜೆ ಸಲ್ಲಿಸುವದರೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಮುತೆôದೆಯರಿಗೆ ಬಳೆ ತೋಡಿಸುವುದು, ಹಾಲಗಂಬ ಸ್ಥಾಪಿಸಿ ಪೂಜೆ ಮಾಡುವುದು, ಒರಳು, ಬೀಸುವ ಕಲ್ಲು, ಒನಕೆ ಪೂಜೆ, ಶ್ರೀ ಸತ್ಯನಾರಾಯಣ ಪೂಜೆ, ಮಹದೇವತಾ ಪೂಜೆ, ಮಡಕೆ ತರುವ ಕಾರ್ಯಕ್ರಮಗಳು ಜರುಗಿದವು. ನಂತರ ಸಾಮೂಹಿಕ ಮದುವೆ ಸಮಾರಂಭದಲ್ಲಿ ವಿವಾಹ ಆಗಲಿರುವ ಐದು ಜೋಡಿಗಳು ಹಾಗೂ ಅವರ ಸಂಬಂಧಿಕರಿಂದ ಮಂಗಳಸೂತ್ರ ಪೋಣಿಸುವುದು, ಬಳೆ ತೋಡುವ ಕಾರ್ಯಕ್ರಮ ನೆರವೇರಿತು. ಹಾಲು ಗಂಬ ಪೂಜೆಯಲ್ಲಿ ಸುರೇಶಸ್ವಾಮಿಸಾ ಮೆಹರವಾಡೆ ದಂಪತಿ ಹಾಗೂ ಶ್ರೀ ಸತ್ಯನಾರಾಯಣ ಪೂಜೆಯಲ್ಲಿ ವಿ.ಎ. ರತನ ದಂಪತಿ ಪಾಲ್ಗೊಂಡಿದ್ದರು.
ಸಮಿತಿ ಅಧ್ಯಕ್ಷ ಭಾಸ್ಕರ ಜಿತೂರಿ, ಉಪಾಧ್ಯಕ್ಷ ವಿ.ಟಿ. ಬದ್ದಿ, ಗೌರವ ಕಾರ್ಯದರ್ಶಿ ಶ್ರೀನಾಥ ಪವಾರ, ಕೋಶಾಧಿಕಾರಿ ಲಕ್ಷ್ಮಣ ದಲಬಂಜನ, ಸಹ ಕಾರ್ಯದರ್ಶಿ ಜಿ.ವಿ. ಜಿತೂರಿ, ಸದಸ್ಯರಾದ ಎಫ್.ಕೆ. ದಲಬಂಜನ, ಜಿ.ಎನ್. ಹಬೀಬ, ಬಿ.ಎಚ್. ಇರ್ಕಲ್, ಎನ್. ಆರ್. ಕಾಟಿಗರ, ವಿ. ಎ. ರತನ, ಮಾಜಿ ಶಾಸಕ ಅಶೋಕ ಕಾಟವೆ, ಎಸ್ಎಸ್ಕೆ ಬ್ಯಾಂಕ್ ಚೇರ್ಮನ್ ವಿಠ್ಠಲ ಲದವಾ, ಎಸ್ಎಸ್ಕೆ ಸಮಾಜದ ಮಾಜಿ ಮುಖ್ಯ ಧರ್ಮದರ್ಶಿ ನೀಲಕಂಠಸಾ ಜಡಿ, ಎನ್ಜಿಇ ಎಫ್ ಸಂಸ್ಥೆಯ ಮಾಜಿ ಅಧ್ಯಕ್ಷ ರಂಗಾ ಬದ್ದಿ ಇತರರು ಇದ್ದರು.