ಜಿಲ್ಲೆ

ತುರ್ತು ಸೇವೆಗೆ 108 ಆಂಬುಲೆನ್ಸ್ ಸಿದ್ಧ

ಬೀದರ್: ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ರಸ್ತೆ ಅಪಘಾತ ಸೇರಿದಂತೆ ಇತರೆ ದುರಂತ ಸಂಭವಿಸುವ ಸಾಧ್ಯತೆಗಳಿರುವ ಕಾರಣ ಸಾರ್ವಜನಿಕರಿಗೆ ತುರ್ತು ಸೇವೆ ಒದಗಿಸಲು ಜಿಲ್ಲೆಯಲ್ಲಿ 108 ಆರೋಗ್ಯ ಕವಚ 19 ಆಂಬುಲೆನ್ಸ್ಗಳು ಸನ್ನದ್ಧವಿರಲಿವೆ. ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಸಾಮಾನ್ಯಕ್ಕಿಂತ ಶೇ. 25ಕ್ಕೂ ಹೆಚ್ಚು ಅವಘಡಗಳು ಸಂಭವಿಸುವ ಸಾಧ್ಯತೆಗಳಿರುತ್ತವೆ. ಹೀಗಾಗಿ ತುರ್ತು ಸೇವೆವಾಗಿ ಎಲ್ಲೆಡೆ ಆಂಬುಲೆನ್ಸ್ ಸೇವೆ ಇರಲಿದೆ. ಜಿಲ್ಲೆಯ ಎಲ್ಲ 90 ಸಿಬ್ಬಂದಿ ರಜೆಯನ್ನು ರದ್ದುಗೊಳಿಸಿ ಕರ್ತವ್ಯದಲ್ಲಿರಲಿದ್ದಾರೆ. ತುರ್ತು ಸ್ಥಿತಿಯಲ್ಲಿ ಜನರು ಫ್ರೀ ಸಂಖ್ಯೆ 108ಕ್ಕೆ ಕರೆ ಮಾಡಿ ಸೇವೆ ಪಡೆಯಬೇಕೆಂದು ಆರೋಗ್ಯ ಕವಚ 108 ಜಿಲ್ಲಾ ಸಂಘಟನೆ ಉಪಾಧ್ಯಕ್ಷ ನವೀನಕುಮಾರ ಮನವಿ ಮಾಡಿದ್ದಾರೆ.