ಜಿಲ್ಲೆ

ತುರ್ತು ಪರಿಸ್ಥಿತಿ ಸಂವಾದ ೨೫ರಂದು

ಕಲಬುರಗಿ: ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಸಂವಿಧಾನ ತಿದ್ದುಪಡಿ ಮಾಡಿರುವ ಧೋರಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಬಿಜೆಪಿಯಿಂದ ಜೂ.೨೫ರಂದು ರಾಜ್ಯದೆಲ್ಲೆಡೆ `ತುರ್ತು ಪರಿಸ್ಥಿತಿ ಸಂವಿಧಾನಕ್ಕೆ ಮಾಡಿದ ಅಪಚಾರ' ವಿಷಯ ಕುರಿತು ಸಂವಾದ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ ತಿಳಿಸಿದರು.
ನಗರದ ಡಾ.ಎಸ್.ಎಂ.ಪAಡಿತ್ ರಂಗಮAದಿರದಲ್ಲಿ ಜೂ.೨೫ರಂದು ಮಧ್ಯಾಹ್ನ ೩ಕ್ಕೆ ಸಂವಾದ ನಡೆಯಲಿದ್ದು, ಮಾಜಿ ಸಚಿವ, ಪP್ಷÀದ ವಕ್ತಾರ ಎನ್.ಮಹೇಶ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ನ್ಯಾಯವಾದಿ ಶ್ರೀಧರ ಪ್ರಭು ಸೇರಿ ಇತರ ಪ್ರಮುಖರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಕಲಬುರಗಿ ಹೈಕೋರ್ಟ್ ನ್ಯಾಯವಾದಿ ಬಸವರಾಜ ಚಿಂಚೋಳಿ ಅಧ್ಯP್ಷÀತೆ ವಹಿಸಲಿz್ದÁರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
೧೯೭೫ರಲ್ಲಿ ಕಾಂಗ್ರೆಸ್ ಪ್ರಧಾನಿ ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ, ಪ್ರಜಾಪ್ರಭುತ್ವದ ಕತ್ತು ಹಿಸುಕುವ ರಾಜಕಾರಣಕ್ಕೆ ನಾಂದಿ ಹಾಡಿದ್ದರು. ತಮಗೆ ಅನುಕೂಲಕರ ರೀತಿ ಸಂವಿಧಾನ ತಿದ್ದುಪಡಿ ಮಾಡಿದ್ದರು. ಆಗ ಅಲಹಾಬಾದ್ ಹೈಕೋರ್ಟ್ ಇಂದಿರಾ ಗಾಂಧಿ ಅವರಿಗೆ ಆರು ವರ್ಷ ಚುನಾವಣೆ ನಿಲ್ಲದಂತೆ ತೀರ್ಪು ನೀಡಿತ್ತು. ಕಾಂಗ್ರೆಸ್ ಸಂವಿಧಾನ ವಿರೋಧಿ ಧೋರಣೆ ಅಂಶಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಸಂವಾದ ಆಯೋಜಿಸಲಾಗಿದೆ ಎಂದರು.
ಅವ್ವಣ್ಣ ಮ್ಯಾಕೇರಿ, ಬಾಬುರಾವ ಚವ್ಹಾಣ, ಧರ್ಮಣ್ಣ ದೊಡ್ಡಮನಿ, ಅಂಬಾರಾಯ ಅಷ್ಠಗಿ, ರಾಘವೇಂದ್ರ ಕುಲಕರ್ಣಿ, ಶರಣು, ಗಿರೀಶ, ರಾಜು ವಾಡೇಕರ್, ರಾಜುಗೌಡ ನಾಗನಹಳ್ಳಿ ಇತರರಿದ್ದರು.