ಜಿಲ್ಲೆ

ತುರುವನೂರಲ್ಲಿ ಪಬ್ಲಿಕ್ ಶಾಲಾರಂಭಕ್ಕೆ ಯತ್ನ

ಚಿತ್ರದುರ್ಗ: ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದೆಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಹೇಳಿದರು. ತಾಲೂಕಿ ನ ತುರುವನೂರು ಬಾಲಕರ ಸರ್ಕಾರಿ ಹಿರಿಯ ಶಾಲೆಯ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿ,2 ಕೋಟಿ ರೂ.ಡಿಎಂಎಫ್ ಅನುದಾನದೊಂದಿಗೆ ಗ್ರಾಮದ ಈ ಶಾಲೆಗೆ ಸುಸಜ್ಜಿತ ಕಟ್ಟಡ ನಿರ್ಮಿಸಲಾಗುವುದು.

ಅಂದಾಜು ಕೊಠಡಿಗಳು ಇರಲಿದ್ದು,ಈ ಶಾಲೆಯಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಆಂಗ್ಲ ಮಾಧ್ಯಮ ತರಗತಿಗಳನ್ನು ಪ್ರಾರಂಭಿಸಲಾ ಗುತ್ತದೆ ಹಾಗೂ ಪಬ್ಲಿಕ್ ಶಾಲೆ ಆರಂಭಕ್ಕೆ ಪ್ರಯತ್ನ ನಡೆದಿದೆ ಎಂದರು. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ತುರುವನೂರು ಗ್ರಾಮಕ್ಕೆ 30 ಕೋಟಿ ರೂ.ಅಧಿಕ ಅನುದಾನ ನೀಡಲಾಗಿದೆ.ಗ್ರಾಮದಲ್ಲಿ ಪಿಯುಸಿ ಕಾಲೇಜು,ಬಾಲಕಿಯರ ಕಾಲೇಜು,ನೂತನ ಇಂದಿರಾಗಾಂಧಿ ವಸತಿ ಶಾಲೆ ನಿರ್ಮಣವಾಗಿದ್ದು,ಸುತ್ತ ಮುತ್ತಲಿನ ನೂರಾರು ಹಳ್ಳಿಗಳ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುತ್ತಿದೆ ಎಂದರು.

ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕಾಗಿದೆ. ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಮಕ್ಕಳನ್ನು ಸ ರ್ಕಾರಿ ಶಾಲೆಗಳ ಕಡೆ ಹೆಜ್ಜೆ ಹಾಕುವಂತೆ ಮಾಡಬೇಕಿದೆ. ಕ್ಷೇತ್ರದ ಎಲ್ಲ ಸರ್ಕಾರಿ ಶಾಲಾ-ಕಾಲೇಜುಗಳನ್ನು ಹಂತ,ಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದರು.

ಗ್ರಾಪಂ ಅಧ್ಯಕ್ಷೆ ನಾಗರತ್ನಮ್ಮ ಮಾಕರ್ಂಡಯ್ಯ,ಉಪಾಧ್ಯಕ್ಷ ತಿಪ್ಪೇಸ್ವಾಮಿ,ಜಿಂಪಂ ಮಾಜಿ ಸದಸ್ಯಬಾಬುರೆಡ್ಡಿ,ಡಿಡಿಪಿಐ ಎಂ.ಆರ್.ಮಂ ಜುನಾಥ, ಬಿಇಒ ಎಸ್.ನಾಗಭೂಷಣ್,ಶಿಕ್ಷಣ ಸಂಯೋಜಕ ಸಂಪತ್‌ಕುಮಾರ್,ತಾಲೂಕು ಕೆಡಿಪಿ ಸದಸ್ಯ ಸಂತೋಷ್,ಎಸ್‌ಎಂಸಿ ಅಧ್ಯಕ್ಷ ಪಾಪಣ್ಣ,ಮುಖಂಡರಾದ ಮಂಜುನಾಥ, ವಿವೇಕಾನಂದಪ್ಪ,ಚಂದ್ರಪ್ಪ,ಖಾಕಿ ಹನುಮಂತರೆಡ್ಡಿ ಮತ್ತಿತರರು ಇದ್ದರು.