ತುಮಕೂರು: ನಗರದ ಟೌನ್ ಹಾಲ್ ವೃತ್ತದಲ್ಲಿ "ಹೆಲಿಕ್ಯಾಪ್ಟರ್ ಮಾಡೆಲ್' ಪ್ರದರ್ಶನಕ್ಕೆ ಮಹಾನಗರ ಪಾಲಿಕೆ ಸಿದ್ಧತೆ ನಡೆಸಿದೆ. ಜಿಲ್ಲೆಯ ಗುಬ್ಬಿ ತಾಲೂಕು ಬಿದರೆಹಳ್ಳದ ಬಳಿ ಎಚ್ಎಎಲ್ ಹೆಲಿಕಾಪ್ಟರ್ ಕಾರ್ಖಾನೆಯ ಕುರುಹಾಗಿ ಪಾಲಿಕೆ ಕಚೇರಿ ಹೊರ ಆವರಣದಲ್ಲಿ 30 ಲಕ್ಷ ರೂಪಾಯಿ ವೆಚ್ಚದಲ್ಲಿ "ಹೆಲಿಕಾಪ್ಟರ್' ಪ್ರದರ್ಶಿಸಲು ವೇದಿಕೆ ನಿಮಾರ್ಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಶಂಕುಸ್ಥಾಪನೆಯನ್ನು ಶನಿವಾರ ನೆರವೇರಿಸಿದರು.
ಈ ಹೆಲಿಕ್ಯಾಪ್ಟರ್ ನೋಡುತ್ತಿದ್ದಂತೆ ಜಿಲ್ಲೆಯ ಹಾಗೂ ಹೊರಗಿನಿಂದ ಬರುವವರಿಗೂ ಜಿಲ್ಲೆಯಲ್ಲಿರುವ ಹೆಲಿಕಾಪ್ಟರ್ ತಯಾರಿಕಾ ಕಾರ್ಖಾನೆ ಬಗ್ಗೆ ಮಾಹಿತಿ ತಿಳಿಯಲಿದೆ. 50 ಲಕ್ಷ ರೂ. ಮೌಲ್ಯದ ಲೈಟ್ ಯುಟಿಲಿಟಿ ಹೆಲಿಕಾಪ್ಟರ್ (ಲು ಉಪಯೋಗಿ ಹೆಲಿಕ್ಯಾಪ್ಟರ್)ಅನ್ನು ಪ್ರದರ್ಶಿಸಲಾಗುವುದು. ಹೆಲಿಕಾಪ್ಟರ್ ಪ್ರದರ್ಶನಕ್ಕಾಗಿ 5 ಅಡಿ ಎತ್ತರ ಹಾಗೂ 50 ಅಡಿ ವ್ಯಾಸದ ಸುತ್ತುವ ವೇದಿಕೆ(ರೋಟೇಷನ್ ್ಲಾಟ್ಾಮ್ರ್)ಯನ್ನು ನಿಮಾರ್ಣ ಮಾಡಲಾಗುವುದು ಎಂದು ಹೇಳಿದರು.
ಶಾಸಕರಾದ ಜಿ.ಬಿ. ಜ್ಯೋತಿಗಣೇಶ್, ಎಚ್.ವಿ.ವೆಂಕಟೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಪಂ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಮತ್ತಿತರರು ಉಪಸ್ಥಿತರಿದ್ದರು.
1.10 ಲಕ್ಷ ರೂಪಾಯಿ ಕೋಟಿ ಬಂಡವಾಳ: ವಿದ್ಯಾವಾಹಿನಿ ಶಿಕ್ಷಣ ಶ್ರೀನಿಧಿ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ಸಚಿವ ಡಾ.ಜಿ.ಪರಮೇಶ್ವರ, ಬೆಂಗಳೂರಿನಲ್ಲಿ ನಡೆದ ಇನ್ವೆಸ್ಟ್ ಕರ್ನಾಟಕ&2025ರಲ್ಲಿ ತುಮಕೂರು ಜಿಲ್ಲೆಗೆ 1 ಲಕ್ಷ 10 ಸಾವಿರ ಕೋಟಿ ಬಂಡವಾಳ ಹರಿದುಬಂದಿದ್ದು, ಈ ಸಂಬಂಧ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು. ಅದರಲ್ಲಿ 17 ಸಾವಿರ ಕೋಟಿಗಳನ್ನು ಮೆಟ್ರೋ ರೈಲು ಯೋಜನೆಯಲ್ಲಿ ಹೂಡಿಕೆ ಮಾಡಲು ಒಪ್ಪಂದವಾಗಿದೆ. ಅದಲ್ಲದೆ, ಕತಾರ್ ರಾಷ್ಟ್ರದ ಕಂಪನಿಗಳು ಸಹ 75 ಸಾವಿರ ಬಂಡವಾಳ ಹೂಡಲು ಉತ್ಸುಕತೆ ತೋರಿದ್ದು, ಒಪ್ಪಿಗೆ ಪತ್ರವನ್ನು ಸಿಎಂಗೆ ನೀಡಿದ್ದಾರೆ. ಇನ್ನೂ ಮೆಟ್ರೋ ರೈಲು ತರುವ ನನ್ನ ಪ್ರಯತ್ನಕ್ಕೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸೋಮಣ್ಣ ಬೆಂಬಲವಾಗಿ ನಿಲ್ಲಬೇಕೆಂದು ಮನವಿ ಮಾಡಿದರು.
ನೀರಿನ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯ: ಪಿಎನ್ಆರ್ ಪಾಳ್ಯದ ಶುದ್ಧ ಕುಡಿಯುವ ನೀರಿನ ಸಂಸ್ಕರಣಾ ಟಕದಲ್ಲಿ ನಿರ್ಮಿಸಿರುವ ನೀರಿನ ಗುಣಮಟ್ಟದ ಪರೀಕ್ಷಾ ಪ್ರಯೋಗಾಲಯವನ್ನು ಸಚಿವ ಡಾ.ಜಿ.ಪರಮೇಶ್ವರ ಉದ್ಘಾಟಿಸಿದರು. 50 ದಶ ಲಕ್ಷ ಮೀಟರ್ ಸಾಮರ್ಥ್ಯದ ಜಲಶುದ್ಧೀಕರಣ ಘಟಕದಲ್ಲಿ 7 ಲಕ್ಷ ರೂ. ವೆಚ್ಚದಲ್ಲಿ ಈ ಪ್ರಯೋಗಾಲಯ ನಿರ್ಮಿಸಲಾಗಿದ್ದು, ಇಲ್ಲಿ ನಗರಕ್ಕೆ ನೀರು ಪೂರೈಸುವ ನೀರನ್ನು ಪರೀಕ್ಷೆಗೆ ಒಳಪಡಿಸಲಾಗುವುದು. ಈ ಪ್ರಕ್ರಿಯೆಯಿಂದ ನೀರಿನಿಂದ ಹರಡುವ ಅನೇಕ ಜಲಜನ್ಯ ಕಾಯಿಲೆಗಳನ್ನು ತಡೆಗಟ್ಟಬಹುದು ಎಂದು ತಿಳಿಸಿದರು. ಪ್ರಯೋಗಾಲಯದಲ್ಲಿ ಇನ್ಕ್ಯೂಬೇಟರ್, ಮೈಕ್ರೋ ಬಯೋಲಜಿ ಕೊಠಡಿ, ಆಟೋಕ್ಲೇವ್, ರಾಸಾಯನಿಕ ನಿಯತಾಂಕಗಳ ಪರೀಕ್ಷಾ ಕೊಠಡಿ, ಸೂಕ್ಷ್ಮ ಜೀವಿಗಳ ಪರೀಕ್ಷಾ ಕೊಠಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿ, ನೀರಿನ ಗುಣಮಟ್ಟದ ಪ್ರಾಯೋಗಿಕ ಪರೀಕ್ಷೆಯನ್ನು ಪರಮೇಶ್ವರ ವೀಕ್ಷಿಸಿದರು.
ಪ್ರಸ್ತುತ ನಗರದಲ್ಲಿ ಸರಬರಾಜಾಗುತ್ತಿರುವ ನೀರು ಕುಡಿಯಲು ಯೋಗ್ಯವಾಗಿದೆ. ಬುಗುಡನಹಳ್ಳಿ ಜಲಸಂಗ್ರಹಾಗಾರ ಸೇರಿ ಪ್ರತಿ ದಿನ 14 ಕಡೆ ನೀರಿನ ಮಾದರಿಗಳನ್ನು ಈ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗುತ್ತಿದೆ. ಮನೆಗಳಿಗೆ ನೀರು ಸರಬರಾಜು ಮಾಡುವ ಮುನ್ನ 6 ಹಂತದಲ್ಲಿ ಶುದ್ಧೀಕರಣಗೊಳಿಸಲಾಗುವುದು.| ಬಿ.ವಿ.ಅಶ್ವಿಜ ಪಾಲಿಕೆ ಆಯುಕ್ತೆ