ಜಿಲ್ಲೆ

ತುಂಬು ಗರ್ಭಿಣಿಗೆ ಯಶಸ್ವಿ ನೇತ್ರ ಶಸ್ತಚಿಕಿತ್ಸೆ

ಚಿತ್ರದುರ್ಗ: ಜಿಲ್ಲಾಸ್ಪತ್ರೆಯಲ್ಲಿ ಶುಕ್ರವಾರ ನಾಯಕನಹಟ್ಟಿ ಗ್ರಾಮದ ತುಂಬು ಗರ್ಭಿಣಿ ನಾಗವೇಣಿ ಅವರಿಗೆ ವೈದ್ಯರು ಯಶಸ್ವಿಯಾಗಿ ನೇತ್ರ ಶಸ್ತಚಿಕಿತ್ಸೆ ನಡೆಸಿದ್ದಾರೆ.

ಜಿಲ್ಲಾಸ್ಪತ್ರೆ ನೇತ್ರ ತಜ್ಞರಾದ ಡಾ.ಬಿ.ಜಿ.ಪ್ರದೀಪ್ ಅವರ ನೇತೃತ್ವದಲ್ಲಿ ಕಣ್ಣಿನ ಶಸ್ತಚಿಕಿತ್ಸೆ ನಡೆಸಿ, ದೃಷ್ಟಿ ದೋಷ ನಿವಾರಿಸಲಾಗಿದೆ.

ನಾಗವೇಣಿ ಅವರ ಮನೆಗೆ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಸುಕನ್ಯಾ, ಆರೋಗ್ಯ ನಿರೀಕ್ಷಣಾಧಿಕಾರಿ ಚೈತ್ರಾ ಅವರು ಭೇಟಿ ನೀಡಿದ್ದ ವೇಳೆ ಎರಡೂ ಕಣ್ಣಿನ ಪೊರೆಯಿಂದಾಗಿ ದೃಷ್ಟಿ ದೋಷದ ತೊಂದರೆ ಇರುವುದನ್ನು ಪತ್ತೆ ಹಚ್ಚಿದ್ದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರವೀಂದ್ರ, ನೇತ್ರತಜ್ಞೆ ಡಾ.ಶಿಲ್ಪಾ, ನೇತ್ರಾಧಿಕಾರಿ ರಾಮು, ಆಶಾ ಕಾರ್ಯಕರ್ತೆ ದಾಕ್ಷಾಯಣಿ, ಶುಶ್ರೂಷಕರಾದ ರವಿಕುಮಾರ್, ಲಕ್ಷ್ಮಿ ಇತರರಿದ್ದರು.