ಜಿಲ್ಲೆ

ತುಂತುರು ಮಳೆ, ಮೋಡದ ತಂಗಾಳಿ

ಕಲಬುರಗಿ: ಕಾರ್ಮೋಡದ ಮಧ್ಯೆ ತಂಪು ಗಾಳಿಯ ಸೂಸುವ ಜತೆಗೆ ಮಳೆ ಸಿಂಚನವೂ ಸೋಮವಾರ ಇಡೀ ದಿನ ಮುಂದುವರಿಯಿತು. ಕಳೆದ ಮೂರು ದಿನದಿಂದ ಎಡಬಿಡದೆ ಸುರಿಯುತ್ತಿರುವ ಮಳೆಗೆ ಜಿಲ್ಲೆಯಲ್ಲಿ ಕೆರೆ, ಕಟ್ಟೆ, ನದಿ, ಹಳ್ಳಗಳಲ್ಲಿ ಜಲಧಾರೆ ತುಂಬಿ ಹರಿಯುತ್ತಿದ್ದು, ಜನ ಜೀವನ ಅಸ್ತವ್ಯವಸ್ಥವಾಗುವುದು ಮುಂದುವರಿದಿದೆ.
ಸೋಮವಾರ ಬೆಳಗ್ಗೆಯಿಂದಲೇ ಇಡೀ ದಿನ ಕಾರ್ಮೋಡ ಕವಿದಿದ್ದರೆ, ನಗರದ ಲಾಲ್‌ಗೇರಿ ವೃತ್ತ, ಸಿದ್ದಿಬಾಷಾ ದರ್ಗಾ, ಗೋಲ್ಡ್ ಹಬ್, ಸೂಪರ್ ಮಾರ್ಕೆಟ್, ಪ್ರಶಾಂತ ನಗರ, ಮಾಣಿಕೇಶ್ವರಿ ಕಾಲನಿ, ಹಳೇ ಜೇವರ್ಗಿ ರಸ್ತೆಯ ರೈಲ್ವೆ ಕೆಳ ಸೇತುವೆ ಸೇರಿ ತಗ್ಗು ಪ್ರದೇಶಗಳಲ್ಲಿ ಕೆಸರುಮಯ ವಾತಾವರಣ ಸೃಷ್ಟಿಯಾಗಿದೆ. ಜಿಲ್ಲೆಯಲ್ಲಿ ಸೋಮವಾರ ೧೩.೬ ಎಂ.ಎA ಮಳೆ ಸುರಿದಿದ್ದು, ಕಮಲಾಪುರ ತಾಲೂಕಿನ ಕಿಣ್ಣಿಸಡಕ್‌ನಲ್ಲಿ ಅತಿ ಹೆಚ್ಚು ೫೫ ಮೀ.ಮೀ. ಮಳೆಯಾಗಿದೆ.