ಹಾಸನ: ತಿಪಟೂರಿನ ನಗರದ 36 ವರ್ಷದ ನಿವಾಸಿಯೊಬ್ಬರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಿಪಟೂರಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಅಲ್ಲಿಯ ವೈದ್ಯರ ಸಲಹೆ ಮೇರೆಗೆ ಹಾಸನದ ಬಿ.ಎಂ.ರಸ್ತೆಯಲ್ಲಿರುವ ಸ್ಪರ್ಶ್ ಆಸ್ಪತ್ರೆಗೆ ರೋಗಿ ಬಂದಿದ್ದಾರೆ.
ಆ ಸಮಯದಲ್ಲಿ ರೋಗಿಯು ಹಾರ್ಟ್ ಅಟ್ಯಾಕ್‌ಗೆ ಒಳಗಾಗಿದ್ದು ತೀವ್ರ ಎದೆನೋವು ತೊಂದರೆಯಿಂದ ಜೀವನ್ಮರಣ ಹಾಗೂ ಹೃದಯ ವೈಫಲ್ಯದಿಂದ ಬಳಲುತಿದ್ದರು. ಅವರನ್ನು ಬದುಕುಳಿಸುವುದರಲ್ಲಿ ಸ್ಪರ್ಶ್ ಆಸ್ಪತ್ರೆಯ ವೈದ್ಯರಾದ ಡಾ.ಮದಕರಿನಾಯಕ ಅವರು ಯಶಸ್ವಿಯಾಗಿದ್ದಾರೆ.
ರೋಗಿಯನ್ನು ಆ ಕೂಡಲೇ ಸಮಾಲೋಚಿಸಿದ ತಕ್ಷಣ ಆಂಜೋಗ್ರಾಮ್ ಮೂಲಕ ಹೃದಯದ ಪ್ರಮುಖ ರಕ್ತನಾಳ ಪರಿಶೀಲಿಸಿದಾಗ ಶೇ.100 ಬ್ಲಾಕ್ ಆಗಿರುವುದು ತಿಳಿದುಬಂದಿರುತ್ತದೆ. ನಂತರ ಡಾ. ಮದಕರಿನಾಯಕ ಅವರು ರೋಗಿಯ ಸಂಬಂಧಿಕರಿಗೆ ಮುಂದಿನ ಚಿಕಿತ್ಸೆಯ ಬಗ್ಗೆ ತಿಳಿವಳಿಕೆ ನೀಡಿ ಆಂಜಿಯೋಪ್ಲಾಸ್ಟಿ ಹಾಗೂ ಹೃದಯದ ಕೆಲಸವನ್ನು ನಿಯಂತ್ರಿಸಲು ಹೆಚ್ಚಿನ ಚಿಕಿತ್ಸೆ ಐಎಬಿಪಿ ಇಂಟ್ರಾ ಅಯೋರ್ಟಿಕ್ ಬಲೂನ್ ಪಂಪಿಂಗ್ ಅಳವಡಿಸಿ ಯಶಸ್ವಿ ಚಿಕಿತ್ಸೆಯಿಂದ ರೋಗಿಯನ್ನು ಪ್ರಾಣಾಪಾಯದಿಂದ ಬದುಕುಳಿಸಿದ್ದಾರೆ. ಹಾಗೂ ಮುಂದಿನ 9 ದಿನಗಳ ಚಿಕಿತ್ಸೆಯಿಂದ ಸಂಪೂರ್ಣವಾಗಿ ಗುಣಪಡಿಸಿ ರೋಗಿಯನ್ನು ಮನೆಗೆ ಕಳುಹಿಸಿಕೊಟ್ಟಿದ್ದಾರೆ.