ಮದ್ದೂರು ತಾಲೂಕಿನ ಕುದರಗುಂಡಿ ಗ್ರಾಮದಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗುವ ಭಕ್ತರಿಗೆ ವ್ಯವಸ್ಥೆ ಮಾಡಿದ್ದ ಬಸ್‌ಗೆ ಕೆಪಿಸಿಸಿ ಸದಸ್ಯ ಎಸ್.ಗುರುಚರಣ್ ಚಾಲನೆ ನೀಡಿದರು.  
ಜಿಲ್ಲೆ

ತೀರ್ಥಯಾತ್ರೆಯಿಂದ ಜೀವನದಲ್ಲಿ ನೆಮ್ಮದಿ

Mandya

ಮದ್ದೂರು: ತೀರ್ಥಪ್ರವಾಸ ಹಾಗೂ ದೇವರ ದರ್ಶನ ಮಾಡುವುದರಿಂದ ಜೀವನದಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿ ನೆಲೆಸುತ್ತದೆ ಎಂದು ಕೆಪಿಸಿಸಿ ಸದಸ್ಯ ಎಸ್.ಗುರುಚರಣ್ ಹೇಳಿದರು.
ತಾಲೂಕಿನ ಶಂಕರಪುರ, ಉಪ್ಪಿನಕೆರೆ, ಬೆಳತೂರು ಹಾಗೂ ಪಟ್ಟಣದ ವಿವಿಧ ಬಡಾವಣೆಗಳ ಭಕ್ತರಿಗೆ ಸ್ವಂತ ಖರ್ಚಿನಲ್ಲಿ 8 ಬಸ್‌ನಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ಹೊರಟ ಯಾತ್ರಿಗಳ ವಾಹನಕ್ಕೆ ಚಾಲನೆ ನೀಡಿ ಸೋಮವಾರ ಮಾತನಾಡಿದರು.
ಬಹಳ ಹಿಂದಿನಿಂದಲೂ ನಮ್ಮ ಸಂಸ್ಕೃತಿಯಲ್ಲಿ ದೇವರ ದರ್ಶನ ಪಡೆಯಲು ತೀರ್ಥಪ್ರವಾಸಕ್ಕೆ ಹೋಗುವುದು ರೂಢಿಯಲ್ಲಿದೆ. ಈ ಹಿನ್ನೆಲೆಯಲ್ಲಿ ನನ್ನ ಸ್ವಂತ ಹಣದಲ್ಲಿ ಭಕ್ತಾಧಿಗಳು ತಮ್ಮ ಇಷ್ಟ ದೇವರ ದರ್ಶನ ಪಡೆಯಲು ಅನುಕೂಲ ಕಲ್ಪಿಸಲಾಗಿದೆ ಎಂದರು.
ತಾಲೂಕಿನಾದ್ಯಂತ ಈಗಾಗಲೇ ಸಾವಿರಾರು ಭಕ್ತರು ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಿ ದೇವರ ದರ್ಶನ ಪಡೆದುಕೊಂಡು ಬಂದಿದ್ದಾರೆ. ತಾಲೂಕಿನ ಪ್ರತಿಯೊಬ್ಬರಿಗೂ ಭಗವಂತ ಒಳ್ಳೆಯದನ್ನು ಮಾಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ನಾಗೇಗೌಡ, ಮುಖಂಡರಾದ, ಆಶಾಗೋಪಿ, ಮಧು, ಯೋಗೇಶ್‌ಕುಮಾರ್, ರಾಜೇಶ್, ಮುನ್ಸಿಫ್, ನಾರಾಯಣ್ ಇದ್ದರು.