ಕಲಬುರಗಿ: ನಗರದ ಭಾರತ್ ಫ್ರೆÊಡ್ ಪಾರ್ಕ್ನಲ್ಲಿ ನಿರ್ಮಿಸಿರುವ ಮಂದಿರದಲ್ಲಿ ಜೈನ ತೀರ್ಥಂಕರರಾದ ಸುಮತಿನಾಥ ಭಗವಾನರ ನೂತನ ಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ನಿಮಿತ್ತ ನಗರದಲ್ಲಿ ಭಾನುವಾರ ತೀರ್ಥಂಕರರ ಭವ್ಯ ಶೋಭಾಯಾತ್ರೆ ಅದ್ದೂರಿಯಾಗಿ ನಡೆಯಿತು.
ಶ್ರೀ ಮಹಿಂದ್ರಸಾಗರ ಸುರೇಶ್ವರಜೀ ಮಹಾರಸಾಬ್ ಅವರ ಸಾನ್ನಿಧ್ಯದಲ್ಲಿ ನಗರೇಶ್ವರ ಶಾಲೆಯಿಂದ ಭಾರತ್ ಫ್ರೆÊಡ್ ಪಾರ್ಕ್ನಲ್ಲಿ ನಿರ್ಮಿಸಿರುವ ಮಂದಿರದವರೆಗೆ ಛತ್ರಿ, ಛಾಮರ, ವಾದ್ಯ ಘೋಷ, ಜೈಕಾರಗಳೊಂದಿಗೆ ಸಂಭ್ರಮದ ಮೆರವಣಿಗೆ ನಡೆಯಿತು.
ಜೈನ ತೀರ್ಥಂಕರರ ಜನ್ಮ, ವಿಕ್ಷಿತ, ಬ್ರಹ್ಮ ಜ್ಞಾನ, ಅಂತ ಸೇರಿ ಜೀವನದ ಪ್ರಮುಖ ಘಟನೆಗಳ ಜೀವನಾಧಾರಿತ ಛದ್ಮವೇಷಧಾರಿಗಳು ಅಲಂಕೃತ ಸಾರೋಟಿಯಲ್ಲಿ ಆಸಿನರಾಗಿ, ಮೆರವಣಿಗೆಯಲ್ಲಿ ಪಾಲ್ಗೊಂಡರು. ಮೆರವಣಿಗೆಯಲ್ಲಿ ಶೃಂಗರಿಸಿದ ಕುದುರೆಗಳ ನೃತ್ಯ, ಒಂಟೆಗಳು ಮೆರವಣಿಗೆಗೆ ಮೆರಗು ನೀಡಿದವು. ಶ್ರೀ ಆದಿನಾಥ ಜೈನ ಶ್ವೇತಾಂಬರ ಸಂಘದಿAದ ದಿನವಿಡೀ ವೈವಿಧ್ಯಮಯ ಕಾರ್ಯಕ್ರಮಗಳು ನಡೆದವು.
ಜೈನ ಸಮುದಾಯದ ಸಾವಿರಾರು ಪುರುಷ, ಮಹಿಳೆಯರು ತಲೆಗೆ ಪೇಟ ಕಟ್ಟಿಕೊಂಡು ಮೆರವಣಿಗೆಯಲ್ಲಿ ಭಾಗವಹಿಸಿ, ಭಕ್ತಿ ಗೀತೆಗಳಿಗೆ ನೃತ್ಯ ಮಾಡಿ ಸಂಭ್ರಮಿಸಿದರು.
ಶ್ರೀ ಮೇರು ಪದ್ಮಸಾಗರ, ಶ್ರೀ ಅರಹಂ ಪದ್ಮಸಾಗರ, ಶ್ರೀ ಓಂ ಪದ್ಮಸಾಗರ, ಪ್ರಮುಖರಾದ ಉತ್ತಮಚಂದ ಸಿಂಗಾವಿ, ಗೇವರಚಂದ ಜೈನ್, ಸೂರ್ಯಪ್ರಕಾಶ ಸಿಂಗಾವಿ, ಅಮಿತ್ ಜೈನ್, ರಮೇಶ ಪಾರ್ಮರ, ಅಮಿತ್ ಪಾರ್ಮರ, ರಾಜದೀಪ ಅಂಚಲಿಯಾ, ಪ್ರವೀಣ ಅಂಚಲಿಯಾ, ಅಶೋಕ ಸೇಥಿಯಾ, ಅರವಿಂದ ಶಹಾ ಇತರರಿದ್ದರು.