ತಿರುಮಲದಲ್ಲಿ ಬವಿವಿ ಸಂಘದಿಂದ ಲೋಕಾರ್ಪಣೆಗೊಳ್ಳುತ್ತಿರುವ ಯಾತ್ರಿ ನಿವಾಸ ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಮಾಜಿ ಶಾಸಕ ವೀರಣ್ಣ ಚರಂತಿಮಠ, ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, ಸಂಘದ ಸದಸ್ಯರಾದ ಎಸ್.ಆರ್.ಮನಹಳ್ಳಿ, ರಾಜು ಮಲ್ಲನಗೌಡ ಪಾಟೀಲ ಸೇರಿದಂತೆ ಇತರರು ಇದ್ದರು. 
ಜಿಲ್ಲೆ

ತಿರುಮಲದಲ್ಲಿ ಶೀಘ್ರ ಯಾತ್ರಿ ನಿವಾಸ ಲೋಕಾರ್ಪಣೆ

ಬಾಗಲಕೋಟೆ: ಸುಕ್ಷೇತ್ರ ತಿರುಪತಿ ತಿರುಮಲದಲ್ಲಿ ಶೀಘ್ರದಲ್ಲಿ ಬಿವಿವಿ ಸಂಘದ ಯಾತ್ರಿ ನಿವಾಸ ಲೋಕಾರ್ಪಣೆಗೊಳ್ಳಲಿದೆ ಎಂದು ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಹೇಳಿದರು.

ಬಿವಿವಿ ಸಂಘದಿಂದ ತಿರುಮಲದಲ್ಲಿ ನಿರ್ಮಾಣಗೊಳ್ಳುತ್ತಿರುವ ಯಾತ್ರಿನಿವಾಸ ಕಾಮಗಾರಿಯನ್ನು ಶುಕ್ರವಾರ ವೀಕ್ಷಿಸಿದ ನಂತರ ಮಾಹಿತಿ ನೀಡಿದರು.
ಈಗಾಗಲೆ ಶ್ರೀಶೈಲದಲ್ಲಿ ಅನ್ನಛತ್ರವನ್ನು ನಿರ್ಮಾಣ ಮಾಡುವ ಮೂಲಕ ದಕ್ಷಿಣ ಭಾರತದಲ್ಲಿ ಬಿವಿವಿ ಸಂಘ ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಕಾರ್ಯಕ್ಕೆ ಮುಂದಾಗಿದೆ. ಅದರ ಮುಂದುವರಿದ ಭಾಗವಾಗಿ ತಿರುಪತಿ ತಿರುಮಲದಲ್ಲಿ ಯಾತ್ರಿ ನಿವಾಸ ನಿರ್ಮಾಣ ಮಾಡಲಾಗುತ್ತಿದೆ. ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಶೀಘ್ರದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದರು.

ಈ ಸಂದರ್ಭದಲ್ಲಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, ಸಂಘದ ಸದಸ್ಯರಾದ ಎಸ್.ಆರ್.ಮನಹಳ್ಳಿ, ರಾಜು ಮಲ್ಲನಗೌಡ ಪಾಟೀಲ, ಅಶೋಕಕುಮಾರ ಕಲ್ಯಾಣಶೆಟ್ಟಿ, ಬಸವರಾಜ ಕೆಂಧೂರ, ಪಂಡಿತ ಆರಬ್ಬಿ, ಡಾ.ಮಹಾಂತೇಶ ಕಡಪಟ್ಟಿ ಸೇರಿದಂತೆ ಅನೇಕ ಸದಸ್ಯರು ಉಪಸ್ಥರಿತರಿದ್ದರು.