ಜಿಲ್ಲೆ

ತಿಕೋಟಾದಲ್ಲಿ ಅಗ್ನಿ ಅವಘಡ: ಬೇಕರಿ- ಪೈಪ್ ಅಂಡಿಯಲ್ಲಿ ಹಾನಿ

ವಿಜಯಪುರ: ಆಕಸ್ಮಿಕ ಅಗ್ನಿ ಅವಘಡದಿಂದಾಗಿ ಬೇಕರಿ ಹಾಗೂ ಪೈಪ್ ಅಂಗಡಿ ಹೊತ್ತಿ ಉರಿದಿದೆ.

ಇಲ್ಲಿನ ತಿಕೋಟಾ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ಬೆಳಗ್ಗೆ ಈ ಅವಘಡ ಸಂಭವಿಸಿದೆ.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಢಾಯಿಸಿ ಬೆಂಕಿ ನಂದಿಸಿದ್ದಾರೆ. ಲಕ್ಷಾಂತರ ರೂ.ಮೌಲ್ಯದ ಸಾಮಗ್ರಿ ಹಾಳಾಗಿದ್ದು ಮಾಲೀಕರು ಕಂಗಾಲಾಗಿದ್ದಾರೆ. ಘಟನೆಯಿಂದಾಗಿ ಕೆಲ ಕಾಲ ಸುತ್ತಲಿನ ನಿವಾಸಿಗಳಲ್ಲಿ ಆತಂಕ ಸೃಷ್ಟಿಯಾಗಿತ್ತು. ಸ್ಥಳೀಯ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.