ತಿಕೋಟಾ ಪಟ್ಟಣ ಪಂಚಾಯಿತಿಯಲ್ಲಿ ಆಡಳಿತಾಧಿಕಾರಿ ಪ್ರಶಾಂತ ಚನಗೊಂಡ ಅಧ್ಯಕ್ಷತೆಯಲ್ಲಿ ಬಜೆಟ್ ಮಂಡನೆ ಮಾಡಲಾಯಿತು. ಅಧಿಕಾರಿಗಳಾದ ಎಚ್.ಎ.ಢಾಲಾಯತ, ರಾಜು ಸುಣಗಾರ, ವಿಲಾಸ ಪವಾರ ಇದ್ದರು. 
ಜಿಲ್ಲೆ

ತಿಕೋಟಾ ಪಟ್ಟಣ ಪಂಚಾಯಿತಿಯಲ್ಲಿ 1.90 ಲಕ್ಷ ರೂ. ಉಳಿತಾಯ ಬಜೆಟ್ ಮಂಡನೆ

ತಿಕೋಟಾ: ಸ್ಥಳೀಯ ಪಟ್ಟಣ ಪಂಚಾಯಿತಿಯಲ್ಲಿ ಆಡಳಿತಾಧಿಕಾರಿ ಪ್ರಶಾಂತ ಚನಗೊಂಡ ಅಧ್ಯಕ್ಷತೆಯಲ್ಲಿ ಬುಧವಾರ ಬಜೆಟ್ ಮಂಡನೆ ಸಭೆ ನಡೆಯಿತು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಚ್.ಎ.ಢಾಲಾಯತ ಮಾತನಾಡಿ, ಪಟ್ಟಣ ಪಂಚಾಯಿತಿಯ 2024-25ನೇ ಸಾಲಿನ ಆಯವ್ಯಯ ಅಂದಾಜು ಪತ್ರಿಕೆಗೆ ಅನುಮೋದನೆ ನೀಡಿದ್ದು, 1.90 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಲಾಗಿದೆ ಎಂದರು.

ಅದರಲ್ಲಿ ರಾಜಸ್ವ ಸ್ವೀಕೃತಿಗಳಾದ ಆಸ್ತಿ ತೆರಿಗೆ, ನೀರಿನ ಕರ, ಉದ್ಯಮ ಹಾಗೂ ಕಟ್ಟಡ ಪರವಾನಗಿ ಸೇರಿ ಇತರ ಮೂಲಗಳಿಂದ 2.96 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ರಾಜಸ್ವ ಪಾವತಿಗಳಾದ ರಸ್ತೆ, ಕುಡಿಯುವ ನೀರು, ಚರಂಡಿ, ಎಸ್‌ಡಬ್ಲುೃ ಎಂ ಮತ್ತು ಉಪಕರಣ, ವಾಹನ ಖರೀದಿ ಒಳಗೊಂಡಂತೆ ಇತರ ಅಭಿವೃದ್ಧಿ ಕಾರ್ಯಗಳಿಗೆ 2.81 ಕೋಟಿ ರೂ. ಮೀಸಲಿಡಲಾಗಿದೆ ಎಂದು ಹೇಳಿದರು.

ಉಪ ತಹಸೀಲ್ದಾರ್ ರಾಜು ಸುಣಗಾರ, ಶಿರಸ್ತೆದಾರ್ ವಿಲಾಸ ಪವಾರ ಇದ್ದರು.