ಜಿಲ್ಲೆ

ತಿಂಗಳಿಗೊಮ್ಮೆ ಕಂದಾಯ ಅದಾಲತ್

ಚನ್ನಬಸಯ್ಯ ಗುರುವಿನ

ವಡಗೇರಾ : ಸರ್ಕಾರದ ಸೌಲಭ್ಯ ಪಡೆಯಲು ರೈತರು ಕಚೇರಿಗೆ ಅಲೆಯಬಾರದೆಂಬ ಮೂಲ ಉz್ದೆÃಶದಿಂದ ಕಂದಾಯ ಅದಾಲತ್ ಕರ‍್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗ್ರೇಡ್-೨ ತಹಸೀಲ್ದಾರ್ ಪ್ರಕಾಶ ಹೊಸಮನಿ ಹೇಳಿದರು.

ತಾಲೂಕಿನ ಹಾಲಗೇರಾ ಗ್ರಾಮದಲ್ಲಿ ತಾಲೂಕು ಆಡಳಿತದಿಂದ ಬುಧವಾರ ಹಮ್ಮಿಕೊಂಡ ಪಿಂಚಣಿ ಅದಾಲತ್ ಮತ್ತು ಪೌತಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರದ ಆದೇಶದನ್ವಯ ತಿಂಗಳಿಗೊಮ್ಮೆ ಗ್ರಾಪಂ ಕೇಂದ್ರ ಸ್ಥಾನದಲ್ಲಿ ಪಿಂಚಣಿ ಅದಾಲತ್ ನಡೆಯಲಿದೆ. ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ, ಅಂಗವಿಕಲ ವೇತನ ಹಾಗೂ ನಿರ್ಗತಿಕ ವಿಧವಾ ವೇತನಕ್ಕೆ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.

ರೈತರಿಂದ ಬಂದ ೬ ಅರ್ಜಿಯನ್ನು ಸ್ಥಳದಲ್ಲಿಯೇ ಮಂಜೂರು ಮಾಡಲಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು.
ಗ್ರಾಪಂ ಅಧ್ಯಕ್ಷ ಭೀಮರಾಯ, ಶಿರಸ್ತೇದಾರ ಶ್ರೀರಾಮುಲು, ಕಂದಾಯ ನಿರೀಕ್ಷಕ ಸಂಜೀವಕುಮಾರ, ಬಸವರಾಜ, ಸಾಬರೆಡ್ಡಿ, ರಾಜಶೇಖರಯ್ಯ, ಬಸವರಾಜ ಸಾಹು, ಮುಖಂಡರಾದ ಹುಸೇನ್‌ಸಾಬ್ ನಾಶಿ, ರಾಜಶೇಖರ ಕಲ್ಮನಿ, ಅಯ್ಯಣ್ಣ ಜೇರಬಂಡಿ, ಯಲ್ಲಪ್ಪ ಸಾದು, ಭೀಮರಾಯ ನಾಯ್ಕೋಡಿ, ಮಲ್ಲಪ್ಪ ಪೂಜಾರಿ ಇತರರಿದ್ದರು.