ಜಿಲ್ಲೆ

ತಿ.ನರಸೀಪುರದಲ್ಲಿ 31 ರಂದು ಉದ್ಯೋಗ ಮೇಳ

ಮೈಸೂರು: ಯುವ ಮುಖಂಡ ಸುನಿಲ್ ಬೋಸ್ ಜನ್ಮದಿನ ಪ್ರಯುಕ್ತ ಆ.31ರಂದು ತಿ.ನರಸೀಪುರದ ಎಪಿಎಂಸಿ ಆವರಣದಲ್ಲಿ ಬೆಳಗ್ಗೆ 10 ಗಂಟೆಗೆ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಡಾ.ಎಚ್.ಸಿ.ಮಹದೇವಪ್ಪ ಅಭಿಮಾನಿ ಬಳಗದ ಸಂಚಾಲಕ ಮಹೇಶ್ ಸೋಸಲೆ ತಿಳಿಸಿದರು.
ಮೇಳದಲ್ಲಿ 100ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ. ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಇಂಜಿನಿಯರಿಂಗ್, ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರುವ ಉದ್ಯೋಗಾಕಾಂಕ್ಷಿಗಳು ಪಾಲ್ಗೊಳ್ಳಬಹುದಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪ್ರತಿಷ್ಠಿತ ಕಂಪನಿಗಳಾದ ಇನ್ಫೋಸಿಸ್, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಮತ್ತೂಟ್ ಫೈನಾನ್ಸ್, ಟೊಯೊಟಾ, ಎನ್‌ಐಟಿಟಿ ಸೇರಿದಂತೆ ಇನ್ನಿತರ ಕಂಪನಿಗಳು ಭಾಗವಹಿಸಲಿವೆ. ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ನಿರುದ್ಯೋಗಿ ಯುವಕ, ಯುವತಿಯರು ಸದುಪಯೋಗಪಡಿಸಿಕೊಳ್ಳಬೇಕು. ಮಾಹಿತಿಗೆ ಮೊ.80956 79666 ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.
ಆಯೋಜಕರಾದ ನಟರಾಜ್, ಶಿವಣ್ಣ, ಜೋಗಿ ಮಹೇಶ್ ಅಶೋಕಪುರಂ, ಜೀವನ್, ಸಂಜಯ್, ರವಿರಾಜ್ ಇದ್ದರು.