ಜಿಲ್ಲೆ

ಪುರಸಭೆ ಸದಸ್ಯ ಜೈಸಿಂಗ್ ಕಾರ್ಯಕ್ಕೆ ಜನರ ಮೆಚ್ಚುಗೆ

ತಾಳಿಕೋಟೆ: ಪಟ್ಟಣದ ರಸ್ತೆಯಲ್ಲಿ ನಿತ್ಯಸಂಚರಿಸುವವರ ಕೈಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಖರೀದಿಸಿದ ಸ್ಯಾನಿಟೈಜರ್ ಹಾಕುತ್ತ ಕೈ ತೊಳೆದುಕೊಳ್ಳಲು ತಿಳಿಸುವ ಮೂಲಕ ಕರೊನಾ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಪುರಸಭೆ ಸದಸ್ಯರೊಬ್ಬರು ಜನ ಮೆಚ್ಚುಗೆ ಪಡೆದಿದ್ದಾರೆ.
ಹೌದು, ಪುರಸಭೆ ಸದಸ್ಯ ಜೈಸಿಂಗ್ ಮೂಲಿಮನಿಯವರೇ ಇಂಥ ಮಾನವೀಯತೆ ಮೆರೆಯುತ್ತಿದ್ದಾರೆ. ಕಳೆದ ಒಂದ ತಿಂಗಳಿನಿಂದ ದಿನಕ್ಕೆ 2 ಲೀಟರ್‌ನಷ್ಟು ತಾವು ತಮ್ಮ ಸ್ವಂತ ಖರ್ಚಿನಲ್ಲಿ ಖರೀದಿಸಿದ ಸ್ಯಾನಿಟೈಜರ್‌ನ್ನು ಕಿರಾಣಿ ಅಂಗಡಿಕಾರರ ಹಾಗೂ ತರಕಾರಿ ಮಾರಾಟ ಮತ್ತು ಕೊಂಡು ಕೊಳ್ಳುವ ಸಾವಿರಾರು ಜನರ ಕೈಗಳಿಗೆ ಹಾಕಿ ಕೈ ತೊಳೆದುಕೊಳ್ಳಲು ತಿಳಿಸುತ್ತಿದ್ದಾರೆ. ಅಲ್ಲದೇ, ಕಡ್ಡಾಯವಾಗಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡದವರಿಗೆ ತರಾಟೆಗೆ ತೆಗೆದುಕೊಂಡು ರೋಗದ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

ಅಲ್ಲದೆ. ಆರು ಬಾಡಿಗೆ ಟ್ರಾೃಕ್ಟರ್‌ಗಳಿಗೆ ಟಾಕಿಗಳನ್ನು ಕೂಡ್ರಿಸಿ ಪಟ್ಟಣದ ಪ್ರಮುಖ ರಸ್ತೆಗಳು, ವಿವಿಧ ಬಡಾವಣೆಗಳ ಸಂದಿಗೊಂದಿಗಳಲ್ಲಿಗಯೂ ಹೈಫೋಕ್ಲೋರೈಡ್ ಸಿಂಪಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.

ಬಡಬಗ್ಗರಿಗೆ ದಿನಸಿ ವಿತರಣೆ

ಪಟ್ಟಣದಲ್ಲಿನ ಕಡುಬಡವರನ್ನು ಗುರುತಿಸಿ ಅವರಿ ತಿಂಗಳಿಗಾಗುವಷ್ಟು ಆಹಾರ ಸಾಮಗ್ರಿಗಳು ಹಾಗೂ ಧನ ಸಹಾಯವನ್ನೂ ಪುರಸಭೆ ಸದಸ್ಯ ಜೈಸಿಂಗ್ ಅವರು ವಾರಿಯರ್ಸ್ ಸಾಲಿನಲ್ಲಿ ಸೇರಿಕೊಂಡಿದ್ದಾರೆ.