ತಾಳಿಕೋಟೆ ಪಟ್ಟಣದಲ್ಲಿರುವ ಐತಿಹಾಸಿಕ ಶ್ರೀರಾಮ ಮಂದಿರದ ಒಳ ಆವರಣದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡ ಸಾರ್ವಜನಿಕರು. ರಾಜು ಹಂಚಾಟೆ, ಜಯಸಿಂಗ ಮೂಲಿಮನಿ, ಜಿ.ಟಿ.ಘೋರ್ಪಡೆ, ಎಲ್.ಎಸ್.ದಯಪುಲೆ ಇತರರಿದ್ದರು. 
ಜಿಲ್ಲೆ

ತಾಳಿಕೋಟೆ ಪಟ್ಟಣದ ಶ್ರೀರಾಮ ಮಂದಿರ ಸ್ವಚ್ಛತೆ ಕಾರ್ಯ

ತಾಳಿಕೋಟೆ: ಅಯೋಧ್ಯೆ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀರಾಮ ಮಂದಿರದಲ್ಲಿ ಜ.22 ರಂದು ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ತಾಳಿಕೋಟೆ ಪಟ್ಟಣದಲ್ಲಿಯ ಶ್ರೀರಾಮ ಮಂದಿರ ಒಳಗೊಂಡು ವಿವಿಧ ದೇವಸ್ಥಾನಗಳಲ್ಲಿ ಸ್ವಚ್ಚತೆ ಕಾರ್ಯವನ್ನು ಸಾರ್ವಜನಿಕರು ಯಾವ ಜಾತಿ ಭೇದವಿಲ್ಲದೆ ಸ್ವಯಂ ಪ್ರೇರಿತವಾಗಿ ಭಾನುವಾರದಂದ ಕೈಗೊಳ್ಳುತ್ತಿದ್ದಾರೆ.

ಜ.14 ರವರೆಗೆ ಸ್ವಚ್ಛತಾ ಕಾರ್ಯ ಕೈಗೊಂಡು ನಂತರ ಜ.22 ರವರೆಗೆ ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲು ಯೋಜಿಸಲಾಗಿದೆ.
ಪಟ್ಟಣದ ಜನತೆಯೇ ತಮ್ಮ ಕೈಲಾದ ಮಟ್ಟಿಗೆ ಸಹಾಯ ಹಸ್ತ ಚಾಚಿ ಮಂದಿರಗಳನ್ನು ಜೀರ್ಣೋದ್ಧಾರ ಮಾಡುತ್ತಿದ್ದಾರೆ.

ಪುರಾತನ ಮಂದಿರಗಳಾದ ಶ್ರೀರಾಮ ಮಂದಿರ, ಸಿದ್ದಲಿಂಗೇಶ್ವರ ದೇವಸ್ಥಾನಗಳಲ್ಲಿ ಹಲವಾರು ಕೆತ್ತನೆಯ ಕುರುಹುಗಳಲ್ಲಿ ಅಮರ ಶಿಲ್ಪಿ ಜಕಣಾಚಾರಿ ಅವರ ಕಲೆ ಅಡಗಿದೆ ಎಂದು ಹೇಳಲಾಗುತ್ತಿದೆ. ರಾಜವಾಡೆಯಲ್ಲಿಯ ಮಹಾದೇವರ ದೇವಸ್ಥಾನದಲ್ಲೂ ಸ್ವಚ್ಛತಾ ಕಾರ್ಯ ನಡೆದಿದೆ.

ಸ್ವಚ್ಛತಾ ಕಾರ್ಯದಲ್ಲಿ ರಾಜು ಹಂಚಾಟೆ, ಜಯಸಿಂಗ ಮೂಲಿಮನಿ, ಜಿ.ಟಿ.ಘೋರ್ಪಡೆ, ಎಲ್.ಎಸ್.ದಯಪುಲೆ ಇತರರಿದ್ದರು.