ಹಾಸನ : ವೀರಶೈವ ಲಿಂಗಾಯತ ಸಮಾಜದಿಂದ ಮಂಗಳವಾರ ನಡೆದ ಸಭೆಯಲ್ಲಿ ಹಾಸನ ತಾಲೂಕು ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷರಾಗಿ 2024-2029 ಅವಧಿಗೆ ಕಟ್ಟಾಯ ಶಿವಕುಮಾರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಇದೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕಟ್ಟಾಯ ಶಿವಕುಮಾರ್ ಅವರು, ನನ್ನನ್ನು ಅಯ್ಕೆ ಮಾಡಲು ಸಹಕರಿಸಿದ ಮಾಜಿ ಶಾಸಕರಾದ ಬಿ.ಆರ್. ಗುರುದೇವ್, ಕೆ.ಎಸ್. ಲಿಂಗೇಶ್, ರಾಜ್ಯ ಕೆಎಸ್‌ಆರ್‌ಟಿಸಿ ಮಾಜಿ ಉಪಾಧ್ಯಕ್ಷ ಸೀಗೆ ಈಶ್ವರಪ್ಪ, ಹಾಸನ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸಿದ್ದೇಶ್ ನಾಗೇಂದ್ರ, ಅಖಿಲ ಭಾರತ ವೀರಶೈವ ಮಹಾಸಭಾದ ಯುವ ಘಟಕದ ಮಾಜಿ ಅಧ್ಯಕ್ಷರಾದ ಸಂಗಂ, ಮಹಾಸಭಾದ ರಾಜ್ಯ ನಿರ್ದೇಶಕರಾದ ಬಿ.ಎಸ್. ಗುರುನಾಥ್ ಹಾಗೂ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಹಿರಿಯರಿಗೆ ಹಾಗೂ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ನಿರ್ದೇಶಕರಾಗಿ ಹೆಚ್.ವಿ. ಹೇಮೇಶ್, ಹೇಮಂತ್ ಕುಮಾರ್, ಸಿ ಎಸ್.ಕುಮಾರ್ ಸ್ವಾಮಿ, ಧರ್ಮ ಶೆಟ್ಟಿಹಳ್ಳಿ, ಕಿರಣ್ ಕುಮಾರ್ ಹೊಸಮನಿ, ಟಿ.ಎನ್. ಮಂಜು, ಟಿ.ಪಿ. ನಾಗರಾಜ್, ಲೋಕೇಶ್ ಮಯೂರಿ, ಎಂ.ವಿ.ರಾಜಶೇಖರ್ ಮೂರ್ತಿ, ಬಿ.ಎಸ್. ದರ್ಶನ, ದಿಲೀಪ್, ಮದನ್, ಮಿಥುನ್, ಎಂ.ಆರ್.ಲತಾ, ಎಂ.ಎಸ್. ಲೀಲಾ, ಚಾಂದಿನಿ ಭೂಷಣ್, ಸುಜಾತಾ ರಾಜ್, ಸಾವಿತ್ರಮ್ಮ, ವೇದಾವತಿ ಮಲ್ಲಿಕಾರ್ಜುನ ಅವಿರೋಧವಾಗಿ ಅಯ್ಕೆಯಾದರು.