ಚಿತ್ರದುರ್ಗ: ಮುಂದಿನ 5 ವರ್ಷಗಳ ಅವಧಿಗೆ ಚಿತ್ರದುರ್ಗ ತಾಲೂಕು ಕೃಷಿಕ ಸಮಾಜಕ್ಕೆ ನೂತನ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ. ಸತೀಶ್, ಪಾರ್ವತಮ್ಮ, ಬಿ.ಟಿ. ಜಗದೀಶ್, ಎಸ್.ಎಲ್. ನಾಗರಾಜು, ಸಿ. ಯೋಗರಾಜ, ಎಂ. ಮಹೇಶ್ವರಪ್ಪ, ಗಂಗಾಧರ, ಕೆ.ಪ್ರಾಣೇಶ್, ಆರ್. ಶಶಿಧರ್, ಮಂಜುಳಮ್ಮ, ಎಂ. ಪರಮೇಶ್, ಎನ್. ಪರಶುರಾಮ್, ಎನ್. ಹನುಮಂತರೆಡ್ಡಿ, ಪಟೇಲ್ ಸಿ. ಶಂಭುಲಿಂಗಪ್ಪ, ಎಂ. ಚನ್ನಬಸಪ್ಪ ಕೃಷಿಕ ಸಮಾಜದ ಸದಸ್ಯರಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ಗುರುವಾರ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿಯಲ್ಲಿ ನಡೆದ ಹೊಸ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಅಧ್ಯಕ್ಷರಾಗಿ ಬಿ.ಟಿ.ಜಗದೀಶ್,ಉಪಾಧ್ಯಕ್ಷರಾಗಿ ಎಂ. ಸತೀಶ್, ಪ್ರಧಾನ ಕಾರ್ಯದರ್ಶಿಯಾಗಿ ಕೆ. ಪ್ರಾಣೇಶ್, ಖಜಾಂಚಿಯಾಗಿ ಪಟೇಲ್ ಸಿ. ಶಂಭುಲಿಂಗ, ಜಿಲ್ಲಾ ಪ್ರತಿನಿಧಿಯಾಗಿ ಆರ್. ಶಶಿಧರ್ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಸಹಾಯಕ ಕೃಷಿ ನಿರ್ದೇಶಕ ಎಚ್.ಕೆ. ರಾಮಕೃಷ್ಣ ತಿಳಿಸಿದ್ದಾರೆ.